‘ಮಾಗಿಯ ಹನಿಗಳು’ ಕವಿ ಅಡ್ಲೂರು ರಾಜು ಅಷ್ಟೇ ಅವರ ಮೊದಲ ಕವನ ಸಂಕಲನ. ಈ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರಿಗೆ ಕೊಡುವ ಪ್ರೋತ್ಸಾಹ ಧನ ಪಡೆದಿದೆ.
ಕವಿತೆಗಳು ಶೋಷಣೆಯ ವಿರುದ್ಧ ಮಾತನಾಡ ತೊಡಗುತ್ತವೆ. ಕೆಲವು ಕವಿತೆಗಳಲ್ಲಿ ವಿಸ್ಮಯವೆಂಬಂತೆ ಕಾವ್ಯ ಕಟ್ಟುವುದನ್ನು ಈ ಕವಿ ಪ್ರಕಟಿಸುತ್ತಾರೆ. ‘ಅಳುವ ಮಕ್ಕಳ ರೋಧನ ಸರಳ ಮುಂದೆ ಅವರ ನೆರಳು ಒಂದೇ’ ಎಂದು ಒರಟಾಗಿಯೇ ಶೋಷಣೆಗಳನ್ನು ಚಿತ್ರಿಸುವ ಕವಿತೆಗಳು ಸಾಕಷ್ಟಿವೆ, ಮಠಾಧೀಶರು, ರಾಜಕಾರಣಿಗಳು, ಉಗ್ರಗಾಮಿಗಳು ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಹೀನಕೃತ್ಯವೆಸಗುವ ದುರುಳರ ಬಗ್ಗೆಯೂ ಕ್ರೌರ್ಯ ತುಂಬಿದ್ದನ್ನು ಕವಿತೆಗಳು ಹಿಡಿದಿಟ್ಟಿವೆ.
ಅಡ್ಲೂರು ರಾಜು ಅಷ್ಟೆ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದವರು. ಎಂಜಿನಿಯರಿಂಗ್ ಪದವೀಧರರು. ಜೊತೆಗೆ ಸಾಹಿತ್ಯದ ಆಸಕ್ತಿ. ಅವರ ಮೊದಲ ಕವನ ಸಂಕಲನ ‘ಮಾಗಿಯ ಹನಿಗಳು’ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರಿಗೆ ಕೊಡುವ ಪ್ರೋತ್ಸಾಹ ಧನ ಪಡೆದು 2015ರಲ್ಲಿ ಬಿಡುಗಡೆಯಾಯಿತು. ಅವರ ಮೊದಲ ಕಾದಂಬರಿ ‘ಚರ್ಮಾಯಿ’ 2017ರಲ್ಲಿ ಬಿಡುಗಡೆಗೊಂಡಿದ್ದು, ಮತ್ತೊಂದು ಕಾದಂಬರಿ ‘ಇಂದಿರಾ ಬೇಡಿ- 2023’ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಕನ್ನಡ ಸುದ್ದಿ ಮಾಧ್ಯಮದಲ್ಲಿ ತಾಂತ್ರಿಕ ಎಂಜಿನಿಯರ್ ಹುದ್ದೆ ನಿರ್ವಹಿಸುತ್ತಿದ್ದಾರೆ. ...
READ MORE