ಕೊರೊನಾ ಸಂಕಷ್ಟದಲ್ಲೂ ಹನಿಗವನಗಳನ್ನ ಉದುರಿಸಿ ಒಂದಷ್ಟು ಚೈತನ್ಯ ಮೂಡಿಸಿದ ಎಚ್. ಡುಂಡಿರಾಜ್ ಅವರ ಹನಿಗವನಗಳ ಸಂಕಲನ ‘ಕೊರೊನಾರೀ ಸಹೋದರ’. ಕೆಲವೊಮ್ಮೆ ಸ್ವಗತದಂತೆ, ಪಕ್ಕದ ಮನೆಯವರ ಕತೆಯಂತೆ ಭಾಸವಾಗುವ ಇವು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಕೃತಿಗೆ ಬೆನ್ನುಡಿ ಬರೆದಿರುವ ಚಿಂತಾಮಣಿ ಕೊಡ್ಲೆಕೆರೆ, “ಭಾಷೆ, ಪದಗಳೊಡನೆ ಮಧುರ ಬಾಂಧವ್ಯ, ಅದರ ಉಸಿರಿಗೆ ಕಿವಿಗೊಡುವ ಶಕ್ತಿ ಇಲ್ಲದೆ ಹೋದರೆ ಡುಂಡಿಯಂತೆ ಬರೆಯಲಾಗದು. ನಮ್ಮ ಭಾಷೆಯೊಳಗೇ, ನಮ್ಮ ತೀರಾ ಸಾಮಾನ್ಯ ಎನ್ನಿಸುವ ದೈನಿಕದೊಳಗೇ ಹುದುಗಿರುವ ಹಾಸ್ಯವನ್ನು ಅರಳಿಸುವುದು ಸಾಮಾನ್ಯವಲ್ಲ. ಹಾಗೆ ನೋಡಿದಾಗ ನಮ್ಮ ನಗೆಗಾರ ಕವಿಗಳು ಸಾಲಲ್ಲಿ ವಿ.ಜಿ. ಭಟ್ಟ, ದಿನಕರ ದೇಸಾಯಿ, ವೈ.ಎನ್.ಕೆ, ಕೈಲಾಸಂ, ಬಿಳಿಗಿರಿ ಇವರ ಜೊತೆ ನಗುವ, ನಗಿಸುವ, ನಗಿಸಿ ನಗುತ ಬಾಳುವ ವರವ ಪಡೆದುಕೊಂಡ ಭಾಗ್ಯವಂತರಲ್ಲಿ ಡುಂಡಿ ಒಬ್ಬರು. ಅವರ ಹನಿಗವಿತೆಗಳು ವಾಟ್ಸ್ಯಾಪ್ ಮೂಲಕ ಊರೆಲ್ಲ ಹರಿದಾಡಿ ಸಂಜೆಗೆ ಡುಂಡಿ ಮೊಬೈಲಿಗೇ ಮರಳಿದ್ದಿದೆ” ಎಂದಿದ್ದಾರೆ.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE