ವರ್ತಮಾನ ಭಾರತದ ಹಲವು ತಲ್ಲಣಗಳಿಗೆ ಮಿಡಿದ ತರಹೇವಾರಿ ಕವಿತೆಗಳಿರುವ ಸಂಕಲನ ‘ಕಾಮ್ರೆಡ್ ಬಸವಣ್ಣ’. ಸಂಕಲನದ ಕುರಿತು ಜಾಜಿ ದೇವೇಂದ್ರಪ್ಪ ಅವರು ಬರೆಯುತ್ತಾ ಕವಿ ರಮೇಶ ಗಬ್ಬೂರರ ಹಲವಾರು ಕವಿತೆಗಳು ತತ್ವಪದದ ಸ್ವರೂಪದಲ್ಲಿವೆ. ಜನಪ್ರಿಯ ಮಾದರಿಯ ಈ ಹಾಡುಗಳು ಜನರ ಎದೆಯೊಳಗೆ ಎಚ್ಚರದ ಬೀಜಗಳನ್ನು ಬಿತ್ತುತ್ತಲೇ ಇವೆ. ನಿಮ್ಮಿಷ್ಟ ಎಂಬ ಕವಿತೆಯು ಚರಿತ್ರೆಯ ಸಂಗತಿಗಳನ್ನು ರೀ ಚೆಕ್ ಮಾಡುತ್ತದೆ. ರಾಮನನ್ನು ನಾನೆಂದೂ ಒಪ್ಪುವುದಿಲ್ಲ ಎಂಬುದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ತಮ್ಮ ಅಭಿಪ್ರಾಯಗಳಿಗೆ ಕಾವ್ಯದ ಸ್ಪರ್ಶ ನೀಡುತ್ತಾರೆ.
ಹಾಡುಗಾರ, ಕವಿ ರಮೇಶ ಗಬ್ಬೂರ ಅವರು ಜನಿಸಿದ್ದು 1968 ಜೂನ್ 5ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಗಬ್ಬೂರ. ಪ್ರಸ್ತುತ ಗಂಗಾವತಿಯ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕೃಷಿ ಹಾಗೂ ಸಾಮಾಜಿಕ ಚಳವಳಿಯಲ್ಲಿಯೂ ಸಕ್ರಿಯರಾಗಿರುವ ಇವರು ಜಾಗೃತ ಗೀತೆ ರಚನೆ ಹಾಗೂ ಹಾಡುಗಾರಿಕೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಗೂನು ಬೆನ್ನಿನ ಗದ್ದೆ, ಅಲೆಮಾರಿಯ ಹಾಡು, ಗರೀಬ್ ಗಜ಼ಲ್, ಸಂಜೀವಪ್ಪ ಗಬ್ಬೂರ, ಒಲಿದಂತೆ ಹಾಡುವೆ, ಗಬ್ಬೂರ್ ಗಜ಼ಲ್ ಹಾಗೂ ಕಾಮ್ರೆಡ್ ಬಸವಣ್ಣ ಇವರ ಪ್ರಮುಖ ಕೃತಿಗಳು. ...
READ MORE