ಸಾಮಾಜಿಕತೆಯ ಹಸಿವು, ಅದರ ಆಚೆ ಅನಾಮಿಕ ಅಧ್ಯಾತ್ಮದ ಹಸಿವನ್ನು ತಮ್ಮ ಕಾವ್ಯದಲ್ಲಿ ಅಭಿವ್ಯಕ್ತಿಪಡಿಸಿದ್ದಾರೆ.-ಕವಿ ಮಲ್ಲಿಕಾರ್ಜುನ ತೂಲಹಳ್ಳಿ. ತಮ್ಮ ಸುತ್ತಲ ಲೋಕವನ್ನು ಪರಂಪರೆಯ ನಿನ್ನೆಯ ದನಿಗಳಿಂದ ತಮ್ಮ ದನಿಯನ್ನು ತಾನು ಪ್ರತಿಧ್ವನಿಸಿಕೊಳ್ಳಲು ಯತ್ನಿಸುತ್ತವೆ ಇಲ್ಲಿಯ ಕವಿತೆಗಳು. ಈ ಆಶಾಂತ ಕವಿ ಉದ್ವಿಗ್ನತೆಯನ್ನು ಮರೆಮಾಚಿಕೊಂಡರೂ, ಅಸಹಾಯಕತೆಯಲ್ಲಿ ತನ್ನ ಲೋಕಾನುಭವವನ್ನು ತಮಗೆ ತೋಚಿದ ದಾರಿಯಲ್ಲಿ ಅನಾವರಣ ಮಾಡಿಕೊಳ್ಳುತ್ತಾರೆ.
ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 'ಶರೀಫನ ಬೊಗಸೆ' ಮತ್ತು 'ತುಂಗಭದ್ರೆಯ ಪಾತ್ರದಲಿ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಕವಿತೆಗಳು ಕನ್ನಡ ಪ್ರಭ, ಅವಧಿ ಮುಂತಾದ ದಿನ ಪ್ರತಿಕೆಗಳಲ್ಲಿ ಪ್ರಕಟವಾಗಿವೆ. ...
READ MORE