ಸ್ವಾಗತಂ

Author : ವಿ.ಜಿ.ಭಟ್ಟ

Pages 62

₹ 8.00




Year of Publication: 1985
Published by: ರುಕ್ಮಿಣೀ ಪ್ರಕಾಶನ
Address: ಮುಂಬಯಿ- 400058

Synopsys

‘ಸ್ವಾಗತಂ’ ವಿ.ಜಿ. ಭಟ್ಟ ಅವರ ಕವನ ಸಂಕಲನ. ವಿ.ಜಿ. ಭಟ್ಟ ಎಂದೇ ಪ್ರಖ್ಯಾತರಾದ ವಿಷ್ಣು ಗೋವಿಂದ ಭಟ್ಟರು ಕರ್ನಾಟಕದ ಹಿರಿಯ ಕವಿ. ಅವರ ಕವಿತೆಗಳು ಹೆಚ್ಚು ಲವಲವಿಕೆಯಿಂದ ಕೂಡಿರುತ್ತವೆ. ಸಾಮಾಜಿಕ ಪರಿಸರದಿಂದ, ವಿಶಾಲ ಬದುಕಿನಿಂದ, ಎಷ್ಟು ಸುಲಭವಾಗಿ ವಿ.ಜಿ. ವಸ್ತುಗಳನ್ನು ಆಯ್ದುಕೊಳ್ಳುತ್ತಿದ್ದರು. ಕವಿತೆಯ ನೇಯ್ಗೆ ಬಲು ಸುಲಭ ಈ ಜೇಡನಿಗೆ. ಪ್ರಯಾಸವಿಲ್ಲದ ಪ್ರಸವ. ವಿ.ಜಿ. ಭಟ್ಟ ಅವರ ಕವಿತೆಗಳಲ್ಲಿ ಶೂನ್ಯದಿಂದ ಶಬ್ದಗಳು ಜಾನಪದ ಮೆರಗು ಬೀರುತ್ತ ಬರುತ್ತಿದ್ದವು, ಲಾಸ್ಯವಾಡುತ್ತಾ ಇದು ಮಿಂಚಿನ ಹೊಳಪಿದ್ದ ಕಣ್ಕಟ್ಟು ಯಾವುದೋ ಗವಿಯಿಂದ ಕತ್ತಲೆ ಹೊರ ಜಾರುತ್ತಿತ್ತು. ಕೊರೈಸುವ ಪ್ರಖರ ಬೆಳಕಿನಲ್ಲಿ ಸಮಾಜ ವ್ಯವಸ್ಥೆಯ ಸಹಸ್ರ ಛಿದ್ರಗಳು ಬೆತ್ತಲಾಗುತ್ತಿದ್ದವು. ಆಗ ವಿ.ಜಿ ಕನ್ನಡದಲ್ಲಿ ಸಾಟಿ ಇಲ್ಲದ ವಿಡಂಬನ ಕವಿ. ಅವರ ಇಲ್ಲಿಯ ಕವಿತೆಗಳಲ್ಲೂ ಈ ಎಲ್ಲ ಜೀವಂತಿಕೆಗಳನ್ನು ಕಾಣಬಹುದಾಗಿದೆ.

About the Author

ವಿ.ಜಿ.ಭಟ್ಟ
(03 December 1923 - 06 April 1991)

ಕವಿ ವಿ.ಜಿ. ಭಟ್ಟ ಎಂತಲೇ ಪರಿಚಿತರಾಗಿರುವ ವಿಷ್ಣು ಗೋವಿಂದ ಭಟ್ಟ ಅವರು ಜನಿಸಿದ್ದು 1923 ಡಿಸೆಂಬರ್ 3ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕಡತೋಕಾ ಗ್ರಾಮ ಇವರ ಹುಟ್ಟೂರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹೈಸ್ಕೂಲ್‌ ಉಪಾಧ್ಯಾಯರಾಗಿ ಕೆಲಕಾಲ ಕೆಲಸ ಮಾಡಿ ನಂತರ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಇವರ ಕೃತಿಗಳೆಂದರೆ ಅರಣ್ಯರೋದನ, ಕಾವ್ಯವೇದನೆ, ತುಂಟನ ಪದಗಳು, ಕಿಷ್ಕಂಧೆ ಮತ್ತು ಆತ್ಮಗೀತೆ (ಕವನ ಸಂಕಲನಗಳು), ಪೆದ್ದಂ ಕತೆಗಳು ಮತ್ತು ದಿವಸ (ಕಥಾಸಂಕಲನಗಳು), ಸವಿನೆನಪು (ಇತರೆ) ಸಹ್ಯಾದ್ರಿ (ಜೀವನಚರಿತ್ರೆ), ಖಾದಿಗ್ರಾಮೋದ್ಯೋಗ ...

READ MORE

Related Books