ಪ್ರೀತಿ ಪ್ರೇಮ ಪ್ರಣಯ - ಇದೊಂದು ಕನ್ನಡ ಶಾಯಿರಿ ಸಂಕಲನ. ಓದುಗರೆದೆಯಲ್ಲಿ ಹೊಸತನದ ಅಲೆಯನ್ನು ಎಬ್ಬಿಸುತ್ತವೆ. ಕವಿ ಪರಮೇಶ್ವರಪ್ಪ ಕುದರಿಯವರು ರೂಪಿಸಿಕೊಳ್ಳುವ ಆಡುಮಾತಿನ ಧಾರವಾಡ ಸೊಗಡಿನ ಭಾಷೆಯು ವಾವ್ ವಾವ್... ಎನ್ನಿಸುವಂತೆ ಆಹ್ಲಾದಕರವಾಗಿದೆ .ಸದಾ ಜೀವ ಪರವಾದ ಕಾಳಜಿ, ಪ್ರೀತಿ,ನೋವು,ಹತಾಶೆ ಎಲ್ಲವನ್ನೂ ಒಳಗೊಂಡ ಕುದರಿಯವರ ಶಾಯಿರಿಗಳಲ್ಲಿ ಕಾವ್ಯ ಪ್ರೀತಿ ಜಿನುಗುತ್ತಿದೆ ಎನ್ನುತ್ತಾರೆ ಬೆನ್ನುಡಿ ಬರೆದ ಗದುಗಿನ ಶಾಯರ್ ಮರುಳಸಿದ್ದಪ್ಪ ದೊಡ್ಡಮನಿ.
ಲೇಖಕ ಪರಮೇಶ್ವರ ಕುದರಿ ಅವರು ಮೂಲತಃ ಧಾರವಾಡ ತಾಲೂಕು ಹೆಬ್ಬಳ್ಳಿಯವರು. ಕೃತಿಗಳು: ಕೋತಿ ಮತ್ತು ಫೋನು, ಬಗೆ ಬಗೆ ಆಟ, ಪುಟ್ಟು ಬೇಡಿದ ವರ, ಕೈಲಾಸದಲ್ಲಿ ಕ್ರಿಕೆಟ್, ಮಾತು-ಮುತ್ತು. ಇವರ ಬಗೆ ಬಗೆ ಆಟ’ ಕೃತಿಗೆ ರುಕ್ಮಿಣಿಬಾಯಿ ಸ್ಮಾರಕ ರಾಜ್ಯ ಪ್ರಶಸ್ತಿ, ’ದುರ್ಗದ ಸಿರಿ’ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗುರು ಪುರಸ್ಕಾರ, ’’ಕನ್ನಡ ಸಾಹಿತ್ಯ ಸಾಗರದ ವಿದ್ಯಾ ರತ್ನ’ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ...
READ MORE