ಗರಿ ಮೂಡಿತು

Author : ಸಿ.ಆರ್. ಸುರೇಶ್ (ಚೌಡ್ಲಾಪುರ ಸೂರಿ)

Pages 98

₹ 90.00




Year of Publication: 2020
Published by: ಆರ್.ಕೆ. ಪ್ರಕಾಶನ
Address: ದೈವ ಕೃಪೆ ನಿಲಯ, ಚೌಡ್ಲಾಪುರ, ಕಡೂರು ತಾಲೂಕು ಚಿಕ್ಕಮಗಳೂರು-577548
Phone: 6360891458

Synopsys

ಕವಿ ಸಿ.ಆರ್. ಸುರೇಶ (ಚೌಡ್ಲಾಪುರ ಸೂರಿ) ಅವರ ಕವನ ಸಂಕಲನ-ಗರಿ ಮೂಡಿತು. ಒಟ್ಟು 69 ಕವಿತೆಗಳಿವೆ. ಸ್ವಾರ್ಥ, ಬಡತನ, ಪ್ರಕೃತಿ, ಹೆಣ್ಣು, ಶಿಕ್ಷಣ, ಸಾಮರಸ್ಯ, ಹೀಗೆ ವಸ್ತು ವೈವಿಧ್ಯತೆಯ ಕವನಗಳಿದ್ದು, ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುವಂತಿವೆ. 

ಸಾಹಿತಿ ಟಿ. ಸತೀಶ್ ಜವರೇಗೌಡ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಇಲ್ಲಿಯ ಕವಿತೆಗಳಲ್ಲಿ ಕಲ್ಪನೆಗಿಂತ ಕಟು ವಾಸ್ತವವೇ ಎದ್ದು ಕಾಣುತ್ತದೆ. ಸಮಕಾಲೀನ ಸಮಸ್ಯೆಗಳು, ತಲ್ಲಣಗಳು, ವಿಚಾರಗಳು ಕವಿತೆಗಳ ವಸ್ತುಗಳಾಗಿವೆ. ಬಹುತೇಕ ಕವಿತೆಗಳು ಸಮಾಜಮುಖಿಯಾಗಿಯೇ ಮನದಾಳಕ್ಕೆ ಇಳಿಯುತ್ತವೆ’ ಎಂದು ಪ್ರಶಂಸಿಸಿದ್ದರೆ ಮುನ್ನುಡಿ ಬರೆದ  ಸಾಹಿತಿ ಡಾ. ಪ್ರಸನ್ನಕುಮಾರ್. ಎಂ..ಅವರು ‘ನಿಸರ್ಗದೊಳಗಿನ  ಒಂದು ವಿದ್ಯಮಾನದ ಮೂಲಕ ಮನುಷ್ಯ ಸಮಾಜದ ವಿಪರ್ಯಾಸವನ್ನು  ಸೂಚಿಸುವುದು ಮಾತ್ರವಲ್ಲದೇ ಅಂಧಕಾರದ ಮೌಢ್ಯತೆಯ ಅಸ್ತಿತ್ವದ  ಪರಿಸ್ಥಿತಿಯನ್ನು ಬಿಚ್ಚಿಡುತ್ತದೆ.  ಕವಿತೆಯಲ್ಲೂ ಕವಿ ತಾನು ಕಾಣಬಯಸುವ ಆದರ್ಶ ಸ್ಥಿತಿಯೊಂದನ್ನು ಪ್ರತಿಪಾದಿಸುವುದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯ ಬದುಕಿಗಾಗಿ ಆಶಿಸುವುದು ಅರ್ಥಪೂರ್ಣ ಮಾನವ ಸಂಬಂಧಗಳನ್ನು ಹುಡುಕಾಡುವುದು ಗೋಚರವಾಗುತ್ತದೆ. ಭೂತ,ವರ್ತಮಾನ, ಭವಿಷ್ಯತ್ತಿನ ಈ ಕಾಲತ್ರಯಗಳಲ್ಲಿ ಮಾನವ ಬದುಕಿನಲ್ಲಿ ಆಗುವ ಬದಲಾವಣೆ ಮತ್ತು ತಲ್ಲಣಗಳ ಸೂಕ್ಷ್ಮ ಸಂವೇದನೆಯನ್ನು ಆನಾವರಣಗೊಳಿಸುತ್ತವೆ’ ಎಂದು ಶ್ಲಾಘಿಸಿದ್ದಾರೆ.  

About the Author

ಸಿ.ಆರ್. ಸುರೇಶ್ (ಚೌಡ್ಲಾಪುರ ಸೂರಿ)

ಲೇಖಕ ಸುರೇಶ್.ಸಿ.ಆರ್ (ಕಾವ್ಯನಾಮ: ಚೌಡ್ಲಾಪುರ ಸೂರಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚೌಡ್ಲಾಪುರ ಗ್ರಾಮದವರು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೋಟೆಹಾಳು ಕೆ. ಸೂಗೂರು ಅಂಚೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು. ಎಂ.ಎ. ಬಿ.ಇಡಿ.ಡಿ.ಇಡಿ. ಎಂ.ಎ. ಪದವೀಧರರು. ಸಮಾಜ ವಿಜ್ಞಾನ ವೇದಿಕೆ ಕವಿಬಳಗ ಜಿಲ್ಲಾ ಘಟಕದ ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ಸಾಮಾಜಿಕವಾಗಿ ಜನಜಾಗೃತಿಯ, ಪರಿಸರ ಸಂರಕ್ಷಣೆಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇವರು ಬರೆದ ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಬಹುಮಾನ-ಪ್ರಶಸ್ತಿಗಳನ್ನು ಪಡೆದಿವೆ. ಗರಿ ಮೂಡಿತು-ಇವರ ಮೊದಲ ಕವನ ಸಂಕಲನ.  ಪ್ರಶಸ್ತಿಗಳು: ಅಕ್ಷರ ರತ್ನ, ಸೇವಾ ರತ್ನ. .ಕರುನಾಡು ಸೇವಾರತ್ನ ಪ್ರಶಸ್ತಿ..ಕುವೆಂಪು ಪ್ರಶಸ್ತಿ. ...

READ MORE

Related Books