‘ನನ್ನ ಮಟ್ಟಿಗೆ’ ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅವರ ಕವನ ಸಂಕಲನ. ಲಕ್ಷ್ಮಣರಾವ್ ಅವರು ಕತೆ, ನಾಟಕ, ವ್ಯಕ್ತಿಚಿತ್ರ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೆಲಸ ಮಾಡಿದ್ದರೂ ಅವರ ಪ್ರೀತಿಯ ಕ್ಷೇತ್ರ ಕಾವ್ಯ. `ನನ್ನ ಮಟ್ಟಿಗೆ ' ಅವರ ಹತ್ತನೇ ಕವನ ಸಂಕಲನ.
ಸುಮಾರು 45 ವರ್ಷಗಳ ಕಾಲ ಕಾವ್ಯ ರಚಿಸಿದ ಲಕ್ಷ್ಮಣರಾವ್ , ತಮ್ಮ ಕವನಗಳ ಹಾಗೂ ಭಾವಗೀತೆಗಳಿಂದ ಜನರ ಮನಸ್ಸನ್ನು ಗೆದ್ದಿದ್ದರು, ತಾನು ವ್ಯಕ್ತಿಯಾಗಿ ಮತ್ತು ಕವಿಯಾಗಿ ಬೇರೆ ಬೇರೆಯಲ್ಲ, ತಾನು ಹೇಗೋ ತನ್ನ ಕಾವ್ಯವೂ ಹಾಗೇ ಎಂದು ತಿಳಿದಿದ್ದ ಈ ಕವಿ, ‘ನನ್ನ ಮಟ್ಟಿಗೆ’ ಕವನ ಸಂಕಲನವನ್ನು ಓದುವಾಗ, ಹೀಗೆ ಉಕ್ಕುವ ಜೀವಪ್ರೀತಿಯ ಮೂಲಸೆಲೆ ಎಲ್ಲಿದೆ ಎಂಬ ಒಂದು ಕುತೂಹಲ ಮೂಡುತ್ತದೆ. ಇಲ್ಲಿಯ ಕವಿತೆಗಳು ಜೀವನ ಪ್ರೀತಿಯನ್ನು ತೋರುತ್ತವೆ.
ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್. ಲಕ್ಷ್ಮಣರಾವ್ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...
READ MORE