ಕಾವ್ಯ ಚಿಗುರು

Author : ಸ. ಪಾ. ಚಕ್ರವರ್ತಿ

Pages 108

₹ 100.00




Year of Publication: 2019
Published by: ಸಿಂಚನ ಪ್ರಕಾಶನ
Address: #237, ಸಕ್ಕರ, ಧರ್ಮಾಪುರ ಪೋಸ್ಟ್, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ - 577546
Phone: 8095008847

Synopsys

ಸಕ್ಕರ ಪಾಂಡರಂಗಪ್ಪ ಚಕ್ರವರ್ತಿ ಅವರ ಚೊಚ್ಚಲ ಕವನ ಸಂಕಲನ 'ಕಾವ್ಯ ಚಿಗುರು'. ಈ ಸಂಕಲನವು 81 ಹನಿಕವಿತೆಗಳ ಗುಚ್ಚವಾಗಿವೆ. 52 ಕವಿತೆಗಳು 20-25 ಸಾಲುಗಳನ್ನು ಮೀರುವಂತಿದ್ದರೆ, ಇನ್ನುಳಿದ 29 ಕವಿತೆಗಳು 8-10 ಸಾಲುಗಳಿರುವ ಹನಿಗವಿತೆಗಳೂ ಅಲ್ಲದ, ಮಿನಿಗವಿತೆಗಳೆನ್ನಬಹುದಾದ ಕಾವ್ಯ ಮೊಗ್ಗುಗಳಾಗಿವೆ.  “ಓ ಮುದ್ದು ಮಾನವ” ಎಂಬ ಉದ್ದ ಕವಿತೆಯಿಂದ ಆರಂಭವಾಗಿ “ಕಾವ್ಯ ಚಿಗುರು” ಮಿನಿಗವಿತೆಯೊಂದಿಗೆ ಮುಕ್ತಾಯ ಗೊಳ್ಳುತ್ತದೆ.

“ಕರಿಯ ಕಾರ್ಮೋಡದಿ ಹೊಳೆವ ಬಿಳಿಯ ಚಂದಿರನಂತೆ, ಕಡಲ ಕಿನಾರೆಯ ಸಿಹಿಜಲದಂತೆ, ಬರಡು ಮರುಭೂಮಿಯಲ್ಲಿ ದೊರೆಯುವ ಓಯಾಸಿಸ್‌ನಂತೆ ನೀ ಪ್ರಜ್ವಲಿಸು ಮಾನವ” ಎಂದು ಹೇಳುತ್ತಾ “ಭಾವನೆಗಳ ಭಾವಾಂತರಂಗವೇ ಈ ಕಾವ್ಯ ಚಿಗುರು” ಎಂದು ತಮ್ಮ ಅನುಭವಕ್ಕೆ ಕನ್ನಡಿ ಹಿಡಿಯುತ್ತಾರೆ.

ಚಕ್ರವರ್ತಿಯವರು ಆಶಾವಾದಿಯಾಗಿದ್ದಾರೆ. ಮರುಭೂಮಿಯಲ್ಲಿಯೂ ಒಂದಲ್ಲ ಒಂದು ದಿನ ಓಯಾಸಿಸ್ ಸಿಗುತ್ತದೆಂಬ ವಿಶ್ವಾಸಪೂರ್ವಕ ನಂಬಿಕೆ ಅವರದ್ದು. 

About the Author

ಸ. ಪಾ. ಚಕ್ರವರ್ತಿ

ಯುವ ಬರಹಗಾರ ಸ. ಪಾ. ಚಕ್ರವರ್ತಿ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಕ್ಕರದವರು. ಪ್ರಸ್ತುತ ಎಚ್.ಎ.ಎಲ್-ಎ.ಆರ್‌-ಡಿ-ಸಿಯಲ್ಲಿ ಅಸಿಸ್ಟೆಂಟ್ ಸೂಪರ್ ವೈಸರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಯುವ ಮನಸ್ಸಿನ ತಲ್ಲಣ, ತುಮುಲಗಳನ್ನು ವ್ಯಕ್ತಪಡಿಸುವ ಹಂಬಲದಿಂದ ಹೊರತಂದ ಮೊದಲ ಕವನ ಸಂಕಲನ ’ಕಾವ್ಯ ಚಿಗುರು’. ...

READ MORE

Related Books