ಎಂ ಶ್ರೀಕಾಂತ ತಾಮ್ರಪರ್ಣಿ ಅವರ ಮೊದಲ ಕವನ ಸಂಕಲನ. ಕಾವ್ಯದ ತತ್ವ, ಸಿದ್ಧಾಂತಗಳಿಗೆ ಜೋತು ಬೀಳದೇ, ತಾನು ಕಂಡುಂಡ ಚಿಂತಿಸಿದ ಅನಿಸಿಕೆಗಳು ಇಲ್ಲಿ ಸಹಜವಾಗಿ ಕವನಗಳಾಗಿ ವ್ಯಕ್ತವಾಗಿವೆ.
ಬಹುತೇಕ ಕವನಗಳು ವಸ್ತುವಿನ ದೃಷ್ಟಿಯಿಂದ ವೈವಿಧ್ಯಮಯವಾಗಿವೆ. ಹೆಜ್ಜೆ, ನಿಶ್ಯಬ್ದ, ನೆನಪುಗಳು, ಚಪ್ಪಲಿ, ಕೂಳು, ಕತ್ತಲೆಂದರೆ ಭಯ, ದೀಪವಾರಿದಮೇಲೆ ಕವನಗಳು ಅಮೂರ್ತ ತೆಯ ಗುಣತ್ವ ಪಡೆದಿವೆ. ಕಾವ್ಯದ ಕಣ್ಣಾದ ಭಾವ ವಿಚಾರಗಳಿವೆ. ‘ಒಂದು ಹೆಜ್ಜೆ ಮತ್ತೊಂದು ಹೆಜ್ಜೆಯನ್ನು ನಿರ್ಧರಿಸುತ್ತದಲ್ಲವೇ’ ಎಂದು ಅಭಿಪ್ರಾಯಪಟ್ಟಿದ್ದಾರೆ- ಚಿತ್ರದುರ್ಗದ ಸಾಹಿತಿ ಡಾ. ಜೆ. ಕರಿಯಪ್ಪ ಮಾಳಗಿ.
ಶ್ರೀಕಾಂತ ತಾಮ್ರಪರ್ಣಿ ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ತಂದೆ- ಟಿ.ಮಾರುತಿ, ತಾಯಿ- ಟಿ.ಎಂ. ವೇದಾವತಿ. ಜಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಂತರ ಚಿತ್ರದುರ್ಗದಲ್ಲಿ ಪದವಿ ಪೂರ್ಣಗೊಳಿಸಿದರು. ಮತ್ತೆ, ಹೊಸಪೇಟೆಯಲ್ಲಿ 8 ವರ್ಷ ಕಾಲ ಕಂಪ್ಯೂಟರ್ ತರಬೇತಿ ಕೇಂದ್ರ ಸ್ಥಾಪಿಸಿ ನಿರ್ವಹಿಸಿದರು. ಸದ್ಯ, ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರ ಕೃತಿಗಳ ಓದು, ಕಥೆ, ಕವನ, ಲಲಿತ ಪ್ರಬಂಧ ನಾಟಕ ಬರೆಹ ಹವ್ಯಾಸದ ಜೊತೆಗೆ, ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಬಹುಮುಖ’ ‘ಪ್ರಖರ’ ಇವರದೇ ರಚನೆ-ನಿರ್ದೇಶನಲ್ಲಿ ಪ್ರಯೋಗಾತ್ಮಕವಾಗಿ ಮೂಡಿಬಂದಿದೆ. ಕಿರುಚಿತ್ರಗಳಿಗೆ ಸಂಭಾಷಣೆ, ಗೀತರಚನೆ, ನಿರ್ದೇಶನ ಮಾಡಿದ್ದಾರೆ. ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದ ...
READ MORE