ಲೇಖಕ ಆಲೂರು ದೊಡ್ದನಿಂಗಪ್ಪ ಅವರ ಕವನ ಸಂಕಲನ ‘ನೇಕಾರ’. ಕೃತಿಗೆ ಮುನ್ನುಡಿ ಬರೆದ, ಬಂಜಗೇರ ಜಯಪ್ರಕಾಶ, ‘ನೇಕಾರ ಕವನ ಸಂಕಲನದೊಳಗೆ ಗಮನ ಸೆಳೆಯುವ ಶಬ್ದ ಚಿತ್ರಗಳು ಹಲವಾರಿವೆ. 'ಜೀವದ ಹಾಡು',ಹೀಗೊಂದು..."ಹುಟ್ಟು'ನನ್ನವರಿಗೆ’ ಮುಂತಾದ ಕವಿತೆಗಳು ದೊಡ್ಡನಿಂಗಪ್ಪನ ಸಾದ್ಯತೆಯ ಬಗ್ಗೆ ಭರವಸೆ ಹುಟ್ಟಿಸುವ ರಚನೆಗಳಾಗಿವೆ.’ ಎಂದು ಹೇಳಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ, ದೇವನೂರು ಮಹಾದೇವ ‘ಕರುಳ ತಲ್ಲಣಗಳನ್ನು ಎಳೆ ಮಾಡಿಕೊಂಡು ಕಾವ್ಯದ ಗೂಡು ಕಟ್ಟುವ ಆಲೂರು ದೊಡ್ಡನಿಂಗಪ್ಪ ಎಂಬ ಸಹಜ ಕವಿಗೆ ಅಭಿನಂದಿಸಬೇಕೇ ಅಥವಾ ಕೃತಜ್ಞತೆ ಸಲ್ಲಿಸಬೇಕೆ ? ನನಗೆ ತಿಳಿಯದಾಗಿದೆ’ ಎಂದು ಹೇಳಿದ್ದಾರೆ.
ಲೇಖಕ ಆಲೂರು ದೊಡ್ಡನಿಂಗಪ್ಪ ಅವರು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆಲೂರಿನವರು. ಸದ್ಯಕ್ಕೆ ಮೈಸೂರಿನ ರಂಗಾಯಣದಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸದಾ ಕ್ರಿಯಾಶೀಲರು. 'ಪಲ್ಲಟ' ಕನ್ನಡ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕೃತಿಗಳು: 'ನೇಕಾರ', 'ಮುಟ್ಟು' ಮತ್ತು 'ಎದೆಯ ಹೊಲದಲ್ಲಿ ಸೂರ್ಯಕಾಂತಿ,( ಕವನ ಸಂಕಲನಗಳು). ...
READ MORE