’ಎಂಟಾಣೆ ಪೆಪ್ಪರುಮೆಂಟು’ ಕವನ ಸಂಕಲನದಲ್ಲಿ ಒಟ್ಟು 47 ಕವಿತೆಗಳಿವೆ. ಕವಿ ಇಲ್ಲಿ ತನಗೆ ದಕ್ಕಿದ, ಕಾಡಿದ ಪ್ರಭಾವಿಸಿದ ಭಾವಗಳನ್ನು ಕಾವ್ಯದ ಮಾಲೆಯಾಗಿ ಕಟ್ಟಿದ್ದಾರೆ. ಕವಿತೆಗಳು ಸ್ನೇಹ ಮತ್ತು ಪ್ರೇಮದ ರಂಗನ್ನು ಹಚ್ಚುವ, ಬದುಕಿನ ನಿರಾಶೆಗಳನ್ನು ಮೀರುವ, ನೆನಪುಗಳನ್ನು ಮೆಲುಕು ಹಾಕಲು ಅವಕಾಶವೀಯುವ ಭರವಸೆ, ಸಾಂತ್ವನ ನೀಡುವ ಕವಿತೆಗಳಾಗಿವೆ. ಇದರೊಂದಿಗೆ ಗೃಹಿಣಿಯ, ರೈತನ, ಶ್ರೀಸಾಮಾನ್ಯನ ತೊಳಲಾಟ, ತಾಪತ್ರಯಗಳು ಚಿತ್ರಣಗೊಂಡಿವೆ. ಸಮಕಾಲೀನ ಬದುಕಿನ ಸ್ಥಿತ್ಯಂತರಗಳನ್ನು, ಅಲ್ಲಿನ ಸಂಕಟದೊಂದಿಗಿನ ಸಂತೋಷವನ್ನು ತೆರೆದಿಟ್ಟಿವೆ.
ಚಂದ್ರು ಎಂ ಹುಣಸೂರು, ಸಾಹಿತ್ಯ ಲೋಕಕ್ಕೆ ತಮ್ಮ ಚೊಚ್ಚಲ ಕೃತಿ "ಎಂಟಾಣೆ ಪೆಪ್ಪರುಮೆಂಟು" ಕವನ ಸಂಕಲನ ನೀಡಿದ್ದಾರೆ. ಸಿರಿ ಸೌಂದರ್ಯ ಮಾಸಪತ್ರಿಕೆ ಹಾಗೂ ವಿಶ್ವವಾಣಿ ದೈನಿಕದಲ್ಲಿ ಸಹ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎ. ಪದವೀಧರರು. ...
READ MORE