'ಮಸಣದ ಆತ್ಮ' ಬೇನಾಳರ ಎರಡನೆಯ ಕವನ ಸಂಕಲವಿದು. ಪ್ರಭುತ್ವ ಪ್ರಾಯೋಜಿತ ಕೋಮುವಾದ, ಜಾಗತೀಕರಣ, ಭಯೋತ್ಪಾದನೆಗಳು ಈ ನೆಲದಲ್ಲಿ ಸಮಸ್ಯೆಗಳಾಗಿ ಬೆಳೆದು ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುತ್ತಿವೆ. ಅಕ್ಷರಗಳಿಂದ ಏನೂ ಆಗುವುದಿಲ್ಲ ಎಂದು ಹೇಳುವ ಕೆಲವರ ಅಭಿಪ್ರಾಯಗಳನ್ನು ತಿದ್ದಲು ಕವಿಯು ಇಲ್ಲಿ ಪ್ರಯತ್ನಿಸಿದ್ದಾರೆ.
ಮುಡ್ನಾಕೂಡು ಚಿನ್ನಸ್ವಾಮಿ ಕೃತಿಗೆ ಬೆನ್ನುಡಿ ಬರೆದು “ಇಲ್ಲಿಯ ಕವಿತೆಗಳು ಹೆಚ್ಚಾಗಿ ಪ್ರಶ್ನಿಸುತ್ತವೆ. ಸಮಾನತೆಯ ಆಶಯವನ್ನು ಹೊಂದಿವೆ, ಸಾಮಾಜಿಕ ನ್ಯಾಯಕ್ಕಾಗಿ ತುಡಿಯುತ್ತದೆ, ಆದ್ದರಿಂದ ಸಹಜವಾಗಿಯೇ ವಾಚ್ಯವೆನಿಸುತ್ತವೆ. ಆದರೂ ಭಯವಾಗುತ್ತಿದೆ ಇಂದು....! ನನ್ನ ಹೆಬ್ಬೆರಳುಗಳನ್ನು ನೋಡಿ...! 'ಈ ದ್ರೋಣ ಬ್ರಾಹ್ಮಣನಲ್ಲ' ಎಂಬ ಅಚ್ಚರಿಯ ಸಾಲುಗಳು ಅಲ್ಲಲ್ಲಿ ಕಾಣಸಿಗುತ್ತವೆ.” ಎಂದು ಪ್ರಶಂಸಿಸಿದ್ದಾರೆ.
ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...
READ MORE