೧೯೬೯ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಮರ್ಯಾದೆ ಕವನ ಸಂಕಲನದಲ್ಲಿ ಬೇಂದ್ರೆಯವರ ೩೦ ಕವಿತೆಗಳಿವೆ. ಸಂಕಲನದ ಶೀರ್ಷಿಕೆಯಾಗಿರುವ ಮೊದಲ ಕವಿತೆ. ಬೇಂದ್ರೆಯವರು ನರಬಲಿ ಎಂಬ ಕವಿತೆ ರಚಿಸಿದ್ದಕ್ಕಾಗಿ ಅಂದಿನ ಬ್ರಿಟಿಷ ಸರ್ಕಾರ ಅವರನ್ನು ನಸರ್ ಬಂದಿಗೆ ಒಳಪಡಿಸಿತ್ತು. ಆಗ ಅವರು ಮುಗಧ ಗ್ರಾಮದಲ್ಲಿ ಏಕಾಂತ ವಾಸದಲ್ಲಿರಬೇಕಾಯಿತು. ಆಗ ರಚಿಸಿದ ಕವಿತೆ ಇದು. ಗಣಪತಿ, ನೀನಾದೀನೀ [ದೇವತಾ ಸರಸ್ವತಿ ] ಶಾಂಭವಿ ಎನ್ನುವ ಕವಿತೆಗಳಿವೆ. ಕವಿಗಳಿಗೆ-ಕಿವಿಗಳಿಗೆ,ಕೇಳಿನುಡಿ, ಕಂಡು ನಡೆ ಓ ಕನ್ನಡದ ಕಂದ,ಜಯವಾಗತೈತಿ ಎಂಬ ಮಂಗಲ ಪದ್ಯ,ಮೂಡಿತ್ತು ದೇವರ ಗುಲಾಬಿ ಎನ್ನುವ ಕವಿತೆಗಳು ಮರ್ಯಾದ ಸಂಕಲನದ ಭಾಗವಾಗಿವೆ. ಸನ್ಮತಿ ಯೇಸು ಭಗವಾನ ಎನ್ನುವ ಕವಿತೆ, ಮತ ಇರಲಿ ಯಾವುದೇ ನವಾಜವಾನ, ಸನ್ಮತಿ ಯೇಸು ಭಗವಾನ ,ಜೈ ಹಿಂದ್ ಎಂದಿದೆ. ಸಹಸ್ರ ಬಂಧನ ಎಂಬುದು ಆತ್ಮಶೋಧದ ಹಾಸ್ಯ ಕವನ. ಲಾಲ್ ಬಹದ್ದೂರ ಶಾಸ್ತ್ರಿಯವರನ್ನು ಕುರಿತ ಕವಿತೆಯಿದೆ. ಕತ್ತೆಯ ಸತ್ ಸ್ವರೂಪ ಎಂಬುದರ ಬಗ್ಗೆ ಕವಿತೆ, ಇಲಿಯನ್ನುಕುರಿತ ಕವಿತೆ,ಮಂಕಿಗೆ ವಂಕಿ ಎಂಬ ಕವಿತೆ,ಹದಾಯಿಲ್ಲದ ಸದಾ, ಚಂದು ಮಾಮಾ, ದುಡ್ಡಿನ ಕಥೆ,ಕವಿತೆಗಳು ಮರ್ಯಾದೆ ಸಂಕಲನದಲ್ಲಿವೆ. ಪಂಪನ ನೆನೆಯುದೆನ್ನ ಮನಃ, ಬನವಾಸಿ ದೇಶಮಃ ಎಂಬ ಆದರಿಸಿ ರಚಿಸಿದ ಕವಿತೆ, ಅಮದು ತುಂಬಿತ್ತು ಹಾಲಗಿರಿ ಅರ್ಥದ ಬದಲು ಶಬ್ದದಂತಹ ಕವಿತೆಗಳು ಸಂಕಲನದ ಮಹತ್ವ ಹೆಚ್ಚಿಸಿವೆ. ಒಲವಿನ ನಿಲುವು,ಸಾನೆಟ್ ಕೂಡ ಈ ಸಂಕಲನದಲ್ಲಿವೆ. ಮರ್ಯಾದೆ ಸಂಕಲನವನ್ನು ಬೇಂದ್ರೆಯವರು ತೀರ್ಥಸ್ವರೂಪರಾದ ಕುಲಮಾತೆಯರಿಗೆ ಅರ್ಪಿಸಿದ್ದಾರೆ.ಅಜ್ಜನ ತಾಯಿ ಸೀತಾ, ತಂದೆಯ ತಾಯಿ ಉಮಾ, ಅಜ್ಜಿಯ ತಾಯಿ ರಾಧಾ, ತಾಯಿಗೆ ತಾಯಿ ಗೋಧಾ,ನನ್ನ ತಾಯಿ ಪಾರ್ವತಿ[ಅಂಬಿಕಾ] ನನ್ನ ಮಕ್ಕಳ ತಾಯಿ ಲಕ್ಷ್ಮಿ,ಅವರುಗಳಿಗೆ ಈ ಸಂಕಲನ ಅರ್ಪಿತವಾಗಿದೆ.
ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...
READ MORE