‘ಬೆಳದಿಂಗಳ ಬಿಸಿಲಾಯಿತು’ ಲೇಖಕ ಡಾ. ಬಸವರಾಜ ಸಬರದ ಅವರ ಕವನ ಸಂಕಲನ. ಈ ಕೃತಿಗೆ ಡಾ.ಎಚ್.ಜೆ. ಲಕ್ಕಪ್ಪಗೌಡ ಅವರ ಮುನ್ನುಡಿ ಬರಹವಿದೆ. ಈ ಕವಿತೆಗಳಲ್ಲಿ ನವೋದಯ ಭಾವಗೀತೆಗಳ ನವಿರು, ಕೋಮಲತೆ, ಸಂಗೀತ ಸಾಹಚರ್ಯಗಳು ಮುಖ ಪಡೆದಿವೆ. ಬೆಳದಿಂಗಳು ಬಿಸಿಲಾಯಿತು ಸಂಕಲನ ಮತ್ತೆ ಸಮಾಜದ ಶಿಖರ- ಕಂದರಗಳ ಕಡೆಗೆ, ಮುಗ್ಧ ಜನತೆಯ ಮಡುಗಟ್ಟಿದ ನೋವಿನ ಅಲೆಗಳ ಕಡೆಗೆ ಮುಖಮಾಡಿದೆ. ಪದಗಟ್ಟಿ ಹಾಡೇನ ಸಂಕಲನದಲ್ಲಿ ಜನರ ಎದೆಯ ನೋವುಗಳಿಗೆ ಸ್ಪಂದಿಸಿ ಅವರ ಬದುಕನ್ನು ಸಮೃದ್ಧಗೊಳಿಸಲು ಅಹರ್ನಿಶಿ ಹೋರಾಡಿದ ವ್ಯಕ್ತಿಗಳ ವಿಶಿಷ್ಟ ಪ್ರಯತ್ನಗಳನ್ನು ಲಯಬದ್ಧವಾದ ಗೇಯಸ್ನಿಗ್ದವಾದ ಹಾಡುಗಳ ಮೂಲಕ ಜನಮನಕ್ಕೆ ಮುಟ್ಟಿಸುವ ಪರಿಣಾಮಕಾರಿ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಜೇನಹನಿಗಳು ತಮ್ಮ ಚಿಕ್ಕ-ಚಿಕ್ಕ ಚೌಕಟ್ಟಿನಲ್ಲಿ ಪ್ರೀತಿ-ಪ್ರೇಮಗಳ ಅನಂತ ಮಧುರತೆಯನ್ನು ವೈವಿಧ್ಯತೆಯನ್ನು ತುಂಬಿಕೊಡುವ ಕಲ್ಪನಾಶೀಲ ಕವಿತೆಗಳು. ಮಿಶ್ರಸಂಹಿತ ಮತ್ತು ಕಾಂತಾಸಂಹಿತ ಭಾವನೆಗಳನ್ನು ಜೇನುಭಾಷೆಯಲ್ಲಿ ಸ್ಪುಟಗೊಳಿಸುವ ಸಬರದ ಅವರ ಪ್ರಯತ್ನ ಅನನ್ಯವಾದುದು. ಒಂದು ಪ್ರಧಾನ ಮನೋಧರ್ಮದಲ್ಲಿ ಕವಿತೆಗಳನ್ನು ರಚಿಸುವ ಕವಿ ಪ್ರತಿಭಾವಂತನಾಗಿದ್ದಲ್ಲಿ ಅದಕ್ಕೆ ವಿರುದ್ಧವಾದ ಮತ್ತೊಂದು ಭಾವಲೋಕವನ್ನು ಅಷ್ಟೇ ಸಮರ್ಥವಾಗಿ ತನ್ನಲ್ಲಿ ಒಳಗು ಮಾಡಿಕೊಳ್ಳಬಲ್ಲ ಎಂಬುದನ್ನು ಈ ಸಂಕಲನ ಸಾದರಪಡಿಸುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನ್ನವರ ಹಾಡು, ಹೋರಾಟ, ...
READ MORE