ಕವಿ ಆಶಾ ಮಯ್ಯ ಅವರ ಕವನ ಸಂಕಲನ ಕಾವ್ಯ ದೀಪ್ತಿ. ಮನದ ಸುಪ್ತಭಾವಗಳಿಗೆ ಪ್ರತಿಭೆಯಿಂದಲೂ, ಲೋಕಾನುಭವದಿಂದಲೂ ಮಥಿಸಿದ ಅನುಭಾವಪೂರ್ಣ ಕಲ್ಪನೆಗಳು ಇಲ್ಲಿ ಕವಿತೆಗಳಾಗಿವೆ. ರಮ್ಯತೆಯ ಜಾಡಿನಲ್ಲಷ್ಟೇ ವಿಹರಿಸದೆ ಸಮಾಜಕ್ಕೆ ಸಂದೇಶ ನೀಡುವ ಮೌಲ್ಯಯುತ ಕವನಗಳನ್ನೂ ಇಲ್ಲಿ ಕಾಣಬಹುದು. ಉದಾಹರಣೆಗೆ ಛಲದಿಂದ ಸಾಗು, ವ್ಯಸನದ ಬದುಕು ಹಗಲುಗನಸು ಕವನಗಳು. ಹೋಳಿಹಬ್ಬ ಊರ ಜಾತ್ರೆಯ ಸಂಭ್ರಮ ಕಾರಂತಜ್ಜನ ನೆನಪಿನಲ್ಲಿ ಬರೆದ ಗೀತೆಗಳು ಉತ್ತಮವಾಗಿ ಮೂಡಿವೆ. ಯೋಧನಮನ, ರೈತಗೀತೆ ಕೃಷ್ಣಲೀಲೆ ಈ ಕೃತಿಯ ಉಲ್ಲೇಖನಾರ್ಹ ಕವನಗಳು.
ಪುತ್ತೂರು ನಿವಾಸಿ ಶಿವಪ್ರಸಾದ್ ಮಯ್ಯ ಅವರ ಪತ್ನಿ ಆಶಾ ಮಯ್ಯ ಅವರು ಗೃಹಿಣಿ. ಆದರೆ ಕಥೆ, ಕವನಗಳನ್ನು ಬರೆಯುವುದು, ಛಂದೋಬದ್ಧ ಷಟ್ಪದಿಗಳಲ್ಲೂ ರಚನೆ ಮಾಡುವುದು ಇವರ ಹವ್ಯಾಸ. ಅನ್ಯರ ಸಂಪಾದಕತ್ವದಲ್ಲಿ ಹೊರಬಂದ ಕೃತಿಗಳಲ್ಲೂ, ಕಥೆ, ಕವನ, ಲೇಖನಗಳು ಮುದ್ರಣವಾಗಿರುತ್ತವೆ ಪತ್ರಿಕೆಗಳಲ್ಲೂ ಕವನಗಳು ಪ್ರಕಟವಾಗಿವೆ. ಕೃತಿ: ಕಾವ್ಯ ಸಿಂಧು (ಕವನ ಸಂಕಲನ 2021) ಪ್ರಶಸ್ತಿ : ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ 2020 ...
READ MORE