ಲೇಖಕರಾದ ಮುದಲ್ ವಿಜಯ್ ಹಾಗೂ ಶಿವರಾಜ ಬ್ಯಾಡರಹಳ್ಳಿ ಅವರು ಸಂಪಾದಿಸಿರುವ ಕೃತಿ ಸಾವಿರಾರು ನದಿಗಳು. ಬಡವರ ನಗುವಿನ ಶಕ್ತಿಯ ನೆನಪಿಗೆ ಎಂಬ ಉಪಶೀರ್ಷಿಕಯನ್ನು ಈ ಕೃತಿ ಹೊಂದಿದೆ. ಬೈರಮಂಗಲ ರಾಮೇಗೌಡ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಮುನುಡಿಯಲ್ಲಿ ಹೇಳಿರುವಂತೆ, ಕವಿಗಳು ಮರೆಯಾಗಿ ಒಂದು ವರ್ಷ ತುಂಬುತ್ತಿರುವ ದಿನವನ್ನು ಚಿರಸ್ಮರಣೀಯವಾಗಿಸಲುಹಲವರು ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅಕ್ಷರ ಎನ್ನುವುದೇ ನಾಶವಾಗದ್ದು ಎನ್ನುವ ಅರ್ಥ ಕೊಡುವುದಾದ್ದರಿಂದ ಕೆಲವರು ಪ್ರೀತಿ, ಭಕ್ತಿ, ಗೌರವ ಅಭಿಮಾನದಿಂದ ಬರೆದ ಸಂಪಾದಿತ ಪುಸ್ತಕವನ್ನು ಹೊರತರುತ್ತಾರೆ. ಸಾವಿರಾರು ದನಿಗಳು ಎಂಬ ಈ ಕವನ ಸಂಕಲನವು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳನ್ನು ಆಹ್ವಾನಿಸಿದ ಕವಿಯ ದನಿಯನ್ನು ಸಾವಿರ ಸಾವಿರವಾಗಿ ಮೊಳಗಿಸುವಂತಾಗಲೆಂದು ಪ್ರೀತಿಯಿಂದ ಹಾರೈಸುವೆ ಎಂಬುದಾಗಿ ಹೇಳಿದ್ದಾರೆ.
ಲೇಖಕ ಮುದಲ್ ವಿಜಯ್ ಮೂಲತಃ ತಮಿಳುನಾಡಿನವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಕಡಲಿನಾಳದ ಕವನ’ ಕವನ ಸಂಕಲನ ಆಡಿಯೋ ರೂಪದಲ್ಲಿ ಹೊರ ಬಂದಿದೆ. ‘ಜವುಗು’, ‘ನೂಲಿನ ಬೇಲಿ’ ಅವರ ಮತ್ತಿತರ ಕವನ ಸಂಕಲನಗಳು. ...
READ MORE