2018ರ ಕಾಡುವ ಕಿರಂ ಕಾರ್ಯಕ್ರಮದಲ್ಲಿ ವಾಚಿಸಿದ ಕವಿತೆಗಳ ಸಂಕಲನವೇ 'ಕಿರಂ ಹೊಸ ಕವಿತೆ ಸಂಪುಟ-2' . ಈ ಪುಸ್ತಕವನ್ನು ಕವಿ, ಲೇಖಕ, ನಾಟಕಕಾರ ಬೇಲೂರು ರಘುನಂದನ್ ಸಂಪಾದಿಸಿ ಪ್ರಕಟಿಸಿದ್ದಾರೆ. ನಾಟಕಕಾರ ಕಿರಂ ನಾಗರಾಜ್ ಹೆಸರಿನಲ್ಲಿ ನಡೆವ ಈ ಕಾರ್ಯಕ್ರಮದಲ್ಲಿ ಹೊಸ ತಲೆಮಾರಿನ ಕವಿಗಳು ಹೆಚ್ಚೆಚ್ಚು ಭಾಗಿಯಾಗುತ್ತಾರೆ. ಆದ್ದರಿಂದಲೇ ಇದೊಂದು ಸಾಹಿತ್ಯದ ಸಾಂಸ್ಕೃತಿಕ ದಾಖಲೆ ಎನ್ನಬಹುದು.
‘ಕಾವ್ಯ ಪ್ರೇಮಿಯೊಬ್ಬ ತಾನು ನೀಗಿಕೊಂಡ ನಂತರವೂ ಕಾವ್ಯ ಪ್ರೇಮದ ತೆವಲನ್ನು ತನ್ನ ಮುಂದಿನ ಪೀಳಿಗೆಗೆ ದಾಟಿಸುವ ಈ ರೋಚಕತೆ ಬೆರಗು ಸೃಷ್ಠಿಸುತ್ತದೆ ಎನ್ನುತ್ತಾರೆ ಹಿರಿಯ ಲೇಖಕ ಎಲ್.ಎನ್. ಮುಕುಂದರಾಜ್’. ಕಿರಂ ಏನು ಬರೆದರೋ, ಏನು ಬಿಟ್ಟರೋ ಅವರು ಬದುಕಿದ್ದ ಕಾಲದಲ್ಲೂ, ದೈಹಿಕವಾಗಿ ಅವರು ನಮ್ಮ ಜೊತೆಯಿರದ ಕಾಲದಲ್ಲೀ ಹೀಗೆ ಕನ್ನಡ ಕಾವ್ಯವನ್ನೂ ಗಟ್ಟಿಗೊಳಿಸುತ್ತಲೇ ಇದ್ದಾರೆ. ಅದಕ್ಕೆ ಈ ಸಂಕಲನದ ಎಲ್ಲಾ ಕವಿಗಳು ಸಾಕ್ಷಿಯಾಗಿದ್ದಾರೆ ಎಂಬುದು ಎಲ್.ಎನ್.ಮುಕುಂದರಾಜ್ ಅವರ ಅಭಿಪ್ರಾಯ.
ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ.. ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...
READ MORE