ನೆನಪುಗಳ ಮೆರವಣಿಗೆ ಕವನ ಸಂಕಲನವನ್ನು ಕವಿ ರಾಜೇಸಾಬ ಕೆ. ರಾಟಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಪ್ರಕೃತಿಯ ಪ್ರೀತಿ, ಮಲೆನಾಡಿನ ಹಸಿರು, ನಿಸರ್ಗವ ಉಳಿಸುವ, ಹಸಿರ ಹೊದಿಕೆ, ಜನ್ಮದಾತ ಅಪ್ಪ, ಹಸಿರೀಕರಣ, ನಮ್ಮ ಒಲವಿನ ಪಯಣ, ನನ್ನ ಮನೆ, ಹಸಿರ ಸೀರೆ, ನಿಸರ್ಗದ ನೋವು, ತಾಯಿ, ನನ್ನವಳು, ಕಾಲವೆಂಬ ಜಾಲಗಾರ, ಹಸಿರು, ಉಸಿರು, ಪ್ರೀತಿ, ಪ್ರೇಮ, ಒಂಟಿತನ, ಮಗು, ಮಗ್ಧತೆ, ನಗು, ಮನೆ, ಅಂಗಳ, ತಂದೆಯ ಹೆಜ್ಜೆಗುರುತು, ತಾಯಿಯ ತ್ಯಾಗ, ಸಂಜೆಯ ಸೊಬಗು ಹೀಗೆ ಒಟ್ಟು 61 ಕವಿತಗಳಿವೆ. ಇಲ್ಲಿ ಕವಿ ತನ್ನ ಭಾವದ ಭಿತ್ತಿಯಲ್ಲಿ ಅದುಮಿಟ್ಟ ನುಡಿಗಳನ್ನು ಕವಿತೆಯಾಗಿಸಿದ್ದಾರೆ. ಎದೆಯ ಅಕ್ಕರೆಯ ನುಡಿಗಳನ್ನು ಚೆಂದವಾಗಿ ಹರಡಿದ್ದಾರೆ ಎಂದು ಈ ಕೃತಿಯ ಕುರಿತಾಗಿ ಸಂಕಲನದ ಬೆನ್ನುಡಿಯಲ್ಲಿ ವಿವರಿಸಲಾಗಿದೆ.
ಕವಿ ರಾಜೇಸಾಬ ಕೆ.ರಾಟಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆದವಟ್ಟಿಯವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆದವಟ್ಟಿ ಸರಕಾರಿ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶಿರೂರದಲ್ಲಿ ಪೂರೈಸಿದ್ದಾರೆ. ನಂತರ ಕುಕನೂರದಲ್ಲಿ ಪಿಯುಸಿ ಮುಗಿಸಿ ನಂತರ ಕೊಪ್ಪಳ ಜಿಲ್ಲೆಯ ಮಂಗಳೂರದಲ್ಲಿ ಡಿ.ಎಡ್. ಮುಗಿಸಿ ಯಲಬುರಗಾದಲ್ಲಿ ತಮ್ಮ ಬಿ.ಎ ಪದವಿ ಪಡೆದರು. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ. ಕೃತಿ: ನೆನಪುಗಳ ಮೆರವಣಿಗೆ. ...
READ MORE