ಕವಿ ಚಿಂತಾಮಣಿ ಕೊಡ್ಲೆಕೆರೆ ಅವರ ಕವನ ಸಂಕಲನ-ನೀರ ಹೆಜ್ಜೆ. ಅಮೂರ್ತ ಪರಿಕಲ್ಪನೆಗಳಿಗೆ ಮೂರ್ತ ರೂಪ ನೀಡುವ ಕಲೆಗಾರಿಕೆಯನ್ನು ಕವಿತೆಗಳಲ್ಲಿ ಕಾಣಬಹುದು. ಹಿರಿಯ ಸಾಹಿತಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಕೃತಿಗೆ ಬೆನ್ನುಡಿ ಬರೆದು ‘ಅರ್ವಾಚೀನವಾದ ಅಧ್ಯಾಯತ್ಮ ಕವಿತೆ ಹೇಗಿರಬಹುದು ಎಂದು ಯಾರಾದರೂ ಪ್ರಶ್ನಿಸಿದರೆ ನಾನು ಕೂಡಲೇ ಚಿಂತಾಮಣಿ ಅವರ ಪದ್ಯಗಳತ್ತ ಬೆರಳು ಮಾಡುತ್ತೇನೆ’ ಎಂದು ಕವಿತೆಗಳ ಶ್ರೇಷ್ಠತೆಯನ್ನು ಪ್ರಶಂಸಿಸಿದ್ದಾರೆ. ‘ನೀನೇ ಹೇಳು’ ಪದ್ಯವನ್ನು ವಿಶ್ಲೇಷಿಸಿದ ಅವರು, ದೇವರ ಸರ್ವ ವ್ಯಾಪಕತ್ವವನ್ನು ಇದಕ್ಕಿಂತ ಸರಳವಾದ ಲೌಕಿಕದಲ್ಲಿ, ಅಲೌಕಿಕ ನೆಲೆ ದಕ್ಕುವಂತೆ ಹೇಳುವುದು ಕಷ್ಟಸಾಧ್ಯ. ದೇವರನ್ನು ಗಹನವಾಗಿ, ಲಘುವಾಗಿ, ಭಾವದ ನಾನಾ ಪಲಕುಗಳಲ್ಲಿ ಮುಟ್ಟಿ ಮುಟ್ಟಿ ಗ್ರಹಿಸಲು ಚಿಂತಾಮಣಿ ಅವರ ಈಚಿನ ಪದ್ಯಗಳು ಹವಣಿಸುತ್ತವೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್‌ಸಿ ಪದವಿ ಪಡೆದರು. ತ್ರಿವೆಂಡ್ರಮ್‌ನಲ್ಲಿ ಟೆಲಿ ಕಮ್ಯುನಿಕೇಶನ್ಸ್‌ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು. ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ...
READ MORE