‘ನೆನಪಿನಂಗಳ’ ಎಂಬುದು ಲೇಖಕಿ ಶಾಂತಾ ಪಸ್ತಾಪುರ ಅವರ ಕವನಗಳ ಸಂಕಲನ. ಒಟ್ಟು 49 ಕವಿತೆಗಳಿವೆ. ಸಾಹಿತಿ ಎ.ಕೆ. ರಾಮೇಶ್ವರ ಅವರು ಕೃತಿಗೆ ಮುನ್ನುಡಿ ಬರೆದು ‘ಓದು-ಬರಹ ಹಾಗೂ ಅನುಭವದ ಮೂಸೆಯಲ್ಲಿ ಮೈದಳೆದ ಕವನಗಳಿವು, ಕಾಲಜ್ಞಾನ ಮಾದರಿಯಲ್ಲಿ ಕೆಲವು ಕವಿತೆಗಳಿವೆ. ಬಹುತೇಕ ಕವಿತೆಗಳು ವಾಸ್ತವತೆಗೆ ಕನ್ನಡಿ ಹಿಡಿಯುತ್ತವೆ. ಸಮರಸದಿಂದ ಬಾಳಿದರೆ ಸುಖವಿದೆ ಎಂಬ ಸಂದೇಶಗಳಿವೆ’ ಎಂದು ಪ್ರಶಂಸಿಸಿದ್ದಾರೆ. ದಿನಚರಿ, ರೈತ, ದೂರದ ಗುಡ್ಡ ಕಣ್ಣಿಗೆ ನುಣ್ಣಗೆ, ಭೂಮಿತಾಯಿಯ ಗುಟ್ಟು, ಅಮ್ಮ ಹೀಗೆ ವಿವಿಧ ಶೀರ್ಷಿಕೆಯ ಕವನಗಳಲ್ಲಿ ಕವಯತ್ರಿಯ ಬದುಕಿನ ಅನುಭವ ಗಾಢತೆಯನ್ನು ಕಾಣಬಹುದು.
ಕವಿಯತ್ರಿ ಶಾಂತಾ ಪಸ್ತಾಪುರ ಮೂಲತಃ ಬೀದರದವರು. ತಂದೆ ರಾಚಪ್ಪ ಭಂಡಾರ, ತಾಯಿ ಮಹಾದೇವಿ ಭಂಡಾರ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ. ಕಲಬುರಗಿಯಲ್ಲಿ ವಾಸವಿದ್ದಾರೆ. ಕೃತಿಗಳು: ಮನದಾಳದ ಮಾತು (ಕವನ ಸಂಕಲನ) ಪಯಣ (ಪ್ರವಾಸ ಕಥನ), ನೆನಪಿನಂಗಳ (ಕವನ ಸಂಕಲನ), ಕುಸುಮ ಬಾಲೆ (ಕವನ ಸಂಕಲನ), ಗೆಳೆತಿಯರ ದಂಡು ಯೂರೋಪ್ ಗೆ ಹೋಗಿದ್ದು (ಪ್ರವಾಸ ಕಥನ), ಬದುಕೇ ಒಂದು ಕಥೆ (ಕಥಾ ಸಂಕಲನ), ಅನುಭವ -ಅಭಿವ್ಯಕ್ತಿ ಮತ್ತು ಚಿಂತನ (ಲಲಿತ ಪ್ರಬಂಧಗಳು) , ಕಾವ್ಯಧಾರೆ (ಅವರು ರಚಿಸಿ, ಹಾಡಿದ ಧ್ವನಿ ಸುರುಳಿ) ಪ್ರಶಸ್ತಿ-ಪುರಸ್ಕಾರಗಳು: ಬದುಕೆ ಒಂದು ಕಥೆ ಕಥಾ ಸಂಕಲನಕ್ಕೆ ಶ್ರೇಷ್ಠ ಸಾಹಿತ್ಯ ಕೃತಿ ಪ್ರಶಸ್ತಿ, ಅಖಿಲ ...
READ MORE