`ಸಾಧಕರ ಸಂಗದಲಿ ಕಾವ್ಯಸಿಂಚನ’ ಕೃತಿಯು ಪ್ರಸ್ತುತ ಕವನಮಾಲೆಯಲ್ಲಿ ಸುಮಾರು 60 ಕವನಗಳು ಹೆಣೆಯಲ್ಪಟ್ಟಿದೆ. ಕೆಲವು ಭಾವಗೀತೆಗಳಾದರೆ, ಇನ್ನು ಕೆಲವು ಭಕ್ತಿಪ್ರಧಾನವಾಗಿವೆ. ಶ್ರೀ ರಾಘವೇಂದ್ರ ಸ್ವಾಮಿಯ ಪರಮಭಕ್ತಿಯಾದ ಜಾನಕಿಯವರು, ವಿಶೇಷವಾಗಿ ರಾಯರ ಕುರಿತಾಗಿಯೇ ಬರೆದ ಅನೇಕ ಪದ್ಯಗಳಲ್ಲಿ ಭಕ್ತಿಭಾವ ಮಡುಗಟ್ಟಿ ನಿಂತಿದೆ. ವಯೋಸಹಜವಾದ ಆಧ್ಯಾತ್ಮಿಕ ಪ್ರೀತಿ, ಭಕ್ತಿಗೀತೆಗಳಲ್ಲಿ ವ್ಯಕ್ತಗೊಂಡಿದೆ. “ಭವರೋಗ ವೈದ್ಯನಾದ ಗುರುವಿನ ಮುಂದೆ ನಾವೆಲ್ಲಾ ತೃಣಸಮಾನ”. ಗುರುಕೃಪೆಗಾಗಿ ಹಂಬಲಿಸಿ ಬರೆದ ಜಾನಕಿಯವರ ಅನೇಕ ಕವಿತೆಗಳೇ ಸಾಕ್ಷಿಯಾಗಿವೆ. ಆದಿಶಕ್ತಿಯಲ್ಲೂ ಮೊರೆ ಇಟ್ಟಿದ್ದಾರೆ, ಜಾನಕಿ. ದೇವರಲ್ಲಿ ಅನನ್ಯವಾದ ನಂಬಿಕೆಯುಳ್ಳ ಅವರು, ದೇವರೊಂದಿಗೆ ಅಷ್ಟೊಂದು ಸಲುಗೆಯನ್ನೂ ಇಟ್ಟುಕೊಂಡಿದ್ದಾರೆ. 'ಹಮ್ಮುಬಿಮ್ಮು ರಾಗದ್ವೇಷಗಳನ್ನೆಲ್ಲಾ ನನ್ನಲ್ಲಿ ಏಕೆ ಬಿತ್ತಿರುವೆ? ನನಗೆ ಸ್ವಾತಂತ್ರ್ಯ ಕೊಟ್ಟು ನೋಡು”. “ಮಾಯಾಮೋಹ ಜಾಲದಲ್ಲಿ ನನ್ನನ್ನು ಕಟ್ಟಿಹಾಕಿರುವೆಯಲ್ಲವೇ?” “ಬಿಡಿಸಿಕೊಂಡು ಬರುವೆ ನಾನು ನೋಡುತಿರು ಸುಮ್ಮನೆ” ಎಂದು ಸವಾಲು ಮಾಡುವ ರೀತಿಯಲ್ಲಿ ಬರೆದಿರುವುದು ನನಗಂತೂ ಮೆಚ್ಚುಗೆಯಾಯಿತು. “ಎಲ್ಲವೂ ನಾನೇ” ಎಂದು ಮೆರೆಯುವ ಮನುಷ್ಯನನ್ನು ಸೃಷ್ಟಿಸಿದವ ನೀನೇ ಅಲ್ಲವೇ? ಈ ಭ್ರಮೆಯನ್ನು ಓಡಿಸಿ ಶಾಂತಿ ನೀಡು' ಎಂದು ಬೇಡಿಕೊಳ್ಳುವ ಪರಿ ತುಂಬಾ ವಿಶಿಷ್ಟ ಎನಿಸಿತು.
ಬೆಂಗಳೂರು ಮೂಲದವರಾದ ಜಾನಕಿ ಶ್ರೀನಿವಾಸ್ ಸಣ್ಣ ಕತೆಗಳಲ್ಲಿ ಹೆಸರು ಮಾಡಿರುವ ದಿ.ಕೆ.ಗೋಪಾಲಕೃಷ್ಣರಾಯರ ಮಗಳು. 28-08-1952 ರಂದು ಜನಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಗುರುಕುಲಂನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು, ಗಾಂಧೀಬಜಾರ್ ನ ಚಿನ್ನಿ ಸ್ಕೂಲ್ ನಲ್ಲಿ ಮಧ್ಯಮ, ಗಿರಿಜಾಂಬ ಮುಕುಂದ ದಾಸ್ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ ಪೂರ್ತಿಗೊಳಿಸಿದರು. ಪಿಯುಸಿಯನ್ನು ಎಪಿಎಸ್ ಕಾಲೇಜು, ವಿಜಯ ಕಾಲೇಜಿನಲ್ಲಿ ಬಿ.ಎ ಹಾನರ್ಸ್ ಮಾಡಿ, ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ ಶಿಕ್ಷಣ ಗಳಿಸಿದರು. ತಮ್ಮ 60ನೇ ವಯಸ್ಸಿನಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ ಅವರು ಕಥೆಯೊಳಗೇಳು ಕಥೆ, ಸಂಪತ್ ಮತ್ತು ಇತರ ...
READ MORE