ನೆರ್ಕೆ ಗೋಡೆಯ ರತ್ನಪಕ್ಷಿ

Author : ಎನ್‌.ರವಿಕುಮಾರ್‌ ಟೆಲೆಕ್ಸ್‌

Pages 104

₹ 100.00




Year of Publication: 2020
Published by: ತಳಮಳ ಪ್ರಕಾಶನ
Address: ಜವಾಹರ ರಸ್ತೆ, ಕೊಪ್ಪಳ- 583231

Synopsys

‘ನೆರ್ಕೆ ಗೋಡೆಯ ರತ್ನಪಕ್ಷಿ’ ಕವಿ ಎನ್. ರವಿಕುಮಾರ್ ಟೆಲೆಕ್ಸ್ ಕವನ ಸಂಕಲನ. ಕವಿ ಗವಿಸಿದ್ಧ ಎನ್. ಬಳ್ಳಾರಿ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಇದಾಗಿದ್ದು ಪತ್ರಕರ್ತ ಬಿ.ಎಂ.ಹನೀಫ್ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಜೊತೆಗೆ ಮತ್ತೊರ್ವ ಪತ್ರಕರ್ತರಾದ ದೇಶಾದ್ರಿ ಹೊಸ್ಮನೆ ಬೆನ್ನುಡಿ ಬರೆದಿದ್ದಾರೆ. ಈ ಸಂಕಲನ ಓದುವ ಪ್ರತಿಯೊಬ್ಬರಿಗೂ ಸಿಗಬಹುದಾದದ್ದು ಹಸಿವು, ಬಡತನ, ಅವಮಾನ, ನೋವು, ವೈಚಾರಿಕ ಸಂಘರ್ಷ, ಹುಸಿ ದೇಶಪ್ರೇಮ ಈ ಹೊತ್ತಿನ ಜ್ವಲಂತ ಸಮಸ್ಯೆಗಳಿವು. ಎನ್. ರವಿಕುಮಾರ ಟೆಲೆಕ್ಸ್ ಅವರ ಕವಿತೆಗಳೆಂದರೆ ನೊಂದ ಎದೆಯೊಳಗಿನ ಕುಲುಮೆಯಲ್ಲಿ ಬೆಂದ ಭಾವನೆಗಳು, ಒಡಲುರಿಯ ಕಿಡಿಗಳು ಎನ್ನುತ್ತಾರೆ ದೇಶಾದ್ರಿ ಹೊಸ್ಮನೆ. ಶಿವಮೊಗ್ಗದ ಪಂಚವಟಿಯಂತಹ ಕೊಳಗೇರಿಯಲ್ಲಿ ಹುಟ್ಟಿ, ಬೆಳದು ಪತ್ರಕರ್ತರಾಗಿ ಬೆಳದದ್ದು, ಕವಿಯಾಗಿ ಹೆಸರು ಗಳಿಸಿದ್ದು ಎಷ್ಟು ಅಚ್ಚರಿಯೋ, ಅಷ್ಟೇ ಸೋಜಿಗವೂ ಕೂಡ. ಆಸೆ, ಆಮಿಷಕ್ಕೆ, ಕಸುಬಿಗಾಗಿ ಪೆನ್ನು ಹಿಡಿದವರಲ್ಲ, ಹಸಿವು, ಬಡತನ, ಜಾತಿಯ ಕಾರಣಕ್ಕೆ ಅನುಭವಿಸಿದ ನೋವು ಹೊರ ಹಾಕಲು, ಸಮಾಜದ ವಿಕೃತಗಳನ್ನು ಎದುರಿಸಲು ಪೆನ್ನು ಹಿಡಿದವರು. ‘ನನ್ನ ಕವಿತೆಯೆಂದರೆ ಕದವಿಟ್ಟುಕೊಂಡು ಒಳಗೊಳಗೆ ದುಃಖಳಿಸುವ ಜೀವ ಚರಿತ್ರೆ’ ಎನ್ನುವ ಕವಿ ರವಿಕುಮಾರ್ ಟೆಲೆಕ್ಸ್ ತಮ್ಮ ಕವಿತೆಗಳ ಮೂಲಕ ಜೀವಪರತೆಯನ್ನೇ ಉಸಿರಾಡುತ್ತಾರೆ.

About the Author

ಎನ್‌.ರವಿಕುಮಾರ್‌ ಟೆಲೆಕ್ಸ್‌

ಪತ್ರಕರ್ತ, ಕವಿ ಎನ್. ರವಿಕುಮಾರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ತಂದೆ- ನಾಗಯ್ಯ, ತಾಯಿ- ಗಂಗಮ್ಮ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಲಂಕೇಶ್ ಪತ್ರಿಕೆ ಸೇರಿದಂತೆ ನಾಡಿನ ಹಲವು ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿರುವ ರವಿಕುಮಾರ್ ಸದ್ಯ ಶಿವಮೊಗ್ಗ ಟೆಲೆಕ್ಸ್ ಎಂಬ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  2006ನೇ ಸಾಲಿನಲ್ಲಿ ಅತ್ಯುತ್ತಮ ಅಪರಾಧ ವರದಿಗಾಗಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ  " ಗಿರಿಧರ ಪ್ರಶಸ್ತಿ" ಪಡೆದಿದ್ದ ಅವರು ಸಾಹಿತ್ಯ, ರಂಗಭೂಮಿಗಳಲ್ಲೂ ತೊಡಗಿಕೊಂಡಿದ್ದಾರೆ. ಅಲ್ಲದೇ 2016 -2018ನೇ ಸಾಲಿನಲ್ಲಿ ...

READ MORE

Conversation

Related Books