ಲೇಖಕಿ ಶಶಿರೇಖಾ ನಾಗೇಶ್ ಅವರ ಕವನ ಸಂಕಲನ-ʼಮಾತಿಗಿಳಿದ ಹಣತೆʼ. ಈ ಕವಿತೆಗಳು ಧರಿಸುವ ರೂಪ ಮತ್ತು ತೊಡುವ ಭಾವವೇ ವಿಸ್ಮಿತ. ಮಾತಿಗಿಳಿದ ಹಣತೆಯಲ್ಲಿ ಇರುವ ಸಂವಾದವನ್ನು ಗಮನಿಸಿದಾಗ, ಸೂಕ್ಷವಾದ ಮನಸ್ಸೊಂದರ ಒಳತೋಟಿ ಪದವಾಗಿ ಒಡೆವ ಪರಿ ಇಲ್ಲಿ ಭಿನ್ನವಾಗಿದೆ. ಇಲ್ಲಿನ ಬಹುತೇಕ ಸಾಲುಗಳು ರೋಮ್ಯಾಂಟಿಕ್ ಮತ್ತು ವಿಸ್ಮಯ ಎನ್ನುವುದಕ್ಕಿಂತ ಬಾಳಿನ ಜೊತೆ ಎಡತಾಕಿದ ಉಸಿರಿನ ಪಲಕುಗಳಂತಿವೆ. ಕವಯಿತ್ರಿ ಭಾವಗಳ ತೀವ್ರತೆಯನ್ನು ಅತ್ಯಂತ ಸಂಯಮದಿಂದ ನಿರ್ವಹಿಸಿ ಕವಿತೆಯ ರೂಪವನ್ನು ಕಸೂರಿ ರೀತಿಯಲ್ಲಿ ಹೆಣೆದಿದ್ದಾರೆ. ಸಂವಾದದ ರೀತಿಯಲ್ಲಿರುವ ಇಲ್ಲಿನ ರಚನೆಗಳು ಓದುಗರನ್ನು ಚಿಂತನೆಯ ಅನುಸಂಧಾನಕ್ಕೆ ಆಹ್ವಾನಿಸುತ್ತದೆ.
ಲೇಖಕಿ ಶಶಿರೇಖಾ ನಾಗೇಶ ಅವರು ಮೂಲತಃ ಬೆಂಗಳೂರಿನವರು. ಕಾವ್ಯ ನಾಮ ಮಾನಸಗಂಗೆ. ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿರುವ ಅವರು ನೇಕಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರಸ್ತುತ, ತುಮಕೂರು ಜಿಲ್ಲೆಯ ತಿಪಟೂರಿನವರು. ಕೃತಿಗಳು: ಹಣತೆ (ಕವನ ಸಂಕಲನ) ...
READ MORE