ವಿಜ್ಞಾನಮಯಿ

Author : ಲಿಂಗರಾಜ ರಾಮಾಪೂರ

Pages 96

₹ 90.00




Year of Publication: 2020
Published by: ಸಾಗರಿ ಪ್ರಕಾಶನ
Address: #275/F6-1, ಫಸ್ಟ್ ಫ್ಲೋರ್, 4ನೇ ಕ್ರಾಸ್, ಉತ್ತರಾಧಿಮಠ ರಸ್ತೆ, ಮೈಸೂರು- 570004

Synopsys

‘ವಿಜ್ಞಾನಮಯಿ’ ಲೇಖಕ ಲಿಂಗರಾಜ ರಾಮಾಪೂರ ಅವರ ಕವನ ಸಂಕಲನ. ವೈಜ್ಞಾನಿಕ ವಿಚಾರ ತುಂಬಿದ ಕಲ್ಪನೆಯನ್ನು ಸಾಹಿತ್ಯದ ಇತರ ಪ್ರಕಾರಗಳಂತೆ ಕಾವ್ಯ ರೂಪದಲ್ಲಿ ಪ್ರಕಟಿಸುವುದು ಸುಲಭದ ಮಾತಲ್ಲ. ವಿಜ್ಞಾನ ತಂತ್ರಜ್ಞಾನದ ವಿವಿಧ ಸೌಲಭ್ಯ, ಅನುಕೂಲತೆ, ಅನಾನುಕೂಲತೆ, ಅಪಾಯಗಳನ್ನೂ ಕಾವ್ಯದ ವ್ಯಾಪ್ತಿಯೊಳಗೆ ತರುವ ಕೆಲಸವನ್ನು ಮಾಡುತ್ತಿರುವವರು ಬೆರಳೆಣಿಕೆಯಷ್ಟು ಜನ ಮಾತ್ರ ಅದರಲ್ಲೂ ವಿಜ್ಞಾನದ ಅಂಶಗಳನ್ನು ಮಕ್ಕಳ ಮನಸ್ಸಿಗೆ ತಟ್ಟುವಂತೆ ಕಾವ್ಯ ಕೃಷ ಮಾಡುವವರೂ ಒಬ್ಬಿಬ್ಬರು ಮಾತ್ರ. ವಿಜ್ಞಾನವನ್ನು ಶಾಸ್ತ್ರೀಯವಾಗಿ ಮಕ್ಕಳಿಗೆ ಕಲಿಸುವುದು ಸುಲಭವಲ್ಲ. ಕುತೂಹಲ ಹುಟ್ಟಿಸುವ ಮೂಲಕ ವಿಜ್ಞಾನವನ್ನು ಕಲಿಸಿದಾಗ ಮಾತ್ರ ಮಕ್ಕಳು ಹೆಚ್ಚು ಆಸಕ್ತಿಯಿಂದ ಕಲಿಯುತ್ತಾರೆ. ವಿಜ್ಞಾನವನ್ನು ಕವಿತೆಗಳ ಬೆಡಗು ಬಿನ್ನಾಣದ ಮೂಲಕ ಕಲಿಸಲು ಸಾಧ್ಯವೆ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಬಹುಶಃ ಉತ್ತರ ಸಿಗಲಾರದು.ಇಂತಹ ಹೊಸತನಕ್ಕೆ ಕೈ ಹಾಕಿ, ಅಲ್ಲಿನ ಎಲ್ಲಾ ಸವಾಲುಗಳನ್ನು ಮೈಮೇಲೆ ಎಳೆದುಕೊಳ್ಳಲು ಯಾರೂ ಮುಂದಾಗಲಾರರು. ಸಿದ್ಧ ಚೌಕಟ್ಟಿಗೆ ಜೋತು ಬೀಳುವವರೇ ಹೆಚ್ಚಾಗಿರುವ ಕಾಲದಲ್ಲಿ ಶಿಕ್ಷಕರಾದ ಡಾ. ಲಿಂಗರಾಜ ರಾಮಾಪೂರ ವಿಭಿನ್ನ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಮಕ್ಕಳ ಜ್ಞಾನ, ವಿಜ್ಞಾನದ ಅಂಶಗಳನ್ನು ಒಳಗೊಂಡ ವಿಜ್ಞಾನಮಯಿ ಮಕ್ಕಳಿಗೆ ಆನಂದಮಯಿಯಾಗುವ ಎಲ್ಲಾ ಗುಣಗಳನ್ನು ಹೊಂದಿದೆ. ರಾಮಾಪೂರ ಅವರು ವೈಜ್ಞಾನಿಕ ಅನ್ವೇಷಣೆಗಳನ್ನು ಕಾವ್ಯದಲ್ಲಿ ಚಿತ್ರಿಸಿ, ಮುಂದಿನ ಜೀವನದ ಆಗುಹೋಗುಗಳನ್ನು ಮಾರ್ವಿಕವಾಗಿ ಸಾಹಿತ್ಯದ ಮೂಲಕ ಸುಲಭವಾಗಿ ಚಿತ್ರಿಸಿದ್ದಾರೆ. ತಮ್ಮ ಸೇವಾನುಭವದಲ್ಲಿ ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಿ ಅದನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ ಎನ್ನುವುದಕ್ಕೆ ಇಲ್ಲಿನ ಕವನಗಳು ಸಾಕ್ಷಿಯಾಗುತ್ತವೆ.

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Conversation

Related Books