ಲೇಖಕ ವಡ್ಡರ್ಸೆ ಪ್ರಕಾಶ ಆಚಾರ್ಯ ಅವರ ಕವನ ಸಂಕಲನ ‘ಮೌನ ನಿನಾದ’. ಈ ಕೃತಿಗೆ ಮುನ್ನುಡಿ ಬರೆದ ಬಿ. ಎಂ. ಸೋಮಯಾಜಿ ‘‘ಈ ಸಂಕಲನದಲ್ಲಿ ವಿಷಯ ವೈವಿಧ್ಯ ಇದೆ. ಬಹಳಷ್ಟು ಸರಳವಾಗಿದ್ದು, ಯೋಚನೆಗೆ ಹಚ್ಚುತ್ತದೆ. ಓದಿದ್ದು, ಕೇಳಿದ್ದು; ನಮ್ಮದೇ ಬರಹಗಳು, ಟಿಪ್ಪಣಿಗಳು ಒಂದೆರಡು ವರ್ಷದ ನಂತರ, ಇವುಗಳನ್ನು ಇನ್ನಷ್ಟು ಚೆನ್ನಾಗಿ ಬರೆಯಬಹುದಿತ್ತು ಎಂದು ಅನಿಸುತ್ತದೆ. ಇವರ ಕವಿತೆಗಳನ್ನು ಓದುವಾಗ ಹಾಗೆ ಅನ್ನಿಸುವುದಿಲ್ಲ, ಆದರೆ ಈ ವಿನಯಶೀಲತೆ, ನಿರ್ವಿವಾದವಾಗಿ ಅವರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸರಳವಾಗಿ ಓದಿಸಿಕೊಂಡು ಹೋಗುವ ಕವಿತೆಗಳು, ಅಲ್ಲಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುತ್ತಿರುವುದು ಅದರ ಯೋಗ್ಯತೆಯ ಅಳತೆಗೋಲು.’ ಎಂದು ಪ್ರಶಂಸಿದ್ದಾರೆ.
ಲೇಖಕ ವಡ್ಡರ್ಸೆ ಪ್ರಕಾಶ ಆಚಾರ್ಯ ಇವರು ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ವಡ್ಡರ್ಸೆಯವರು. ತಂದೆ-ಸುಬ್ರಾಯ ಆಚಾರ್ಯ, ತಾಯಿ- ಭವಾನಿ. ಎಂ.ಎ ಮತ್ತು ಬಿ.ಎಡ್ ವಿದ್ಯಾಭ್ಯಾಸ ಪೂರೈಸಿರುವ ಅವರು ಪ್ರಸ್ತುತ ಡ್ಯುಯಲ್ ಸ್ಟಾರ್ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಬಳಿ ಯಿಂದ ರಾಷ್ಟ್ರ ಮಟ್ಟದ ವರೆಗೆ ಕವಿ ಗೋಷ್ಟಿ ಯಲ್ಲಿ ಭಾಗವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದೊಂದಿಗೆ ಸಾಹಿತ್ಯಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ವಡ್ಡರ್ಸೆ ಪ್ರಕಾಶ ಆಚಾರ್ಯ ಅವರು ಪಿಸುನುಡಿದ ಅಂತರಂಗ, ಮೌನ ನಿನಾದ, ಭಾವ ನಿನಾದ, ಒಡಲ ಪ್ರೀತಿ ಎಂಬ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಧ್ವನಿ ಸುರುಳಿ ...
READ MORE