ಜಿರಾಫೆ ಕತ್ತಿನ ಅವ್ವ

Pages 60

₹ 90.00




Year of Publication: 2022
Published by: ಸಂಗಾತ ಪುಸ್ತಕ
Address: ಸಂಗಾತ ಪುಸ್ತಕ , ಗಜೇಂದ್ರಗಡ್ ತಾಲ್ಲೂಕು, ಗದಗ್ ಜಿಲ್ಲೆ, ಪೋಸ್ಟ್ ರಾಜೂರ್ – 582114.
Phone: 9341757653

Synopsys

`ಜಿರಾಫೆ ಕತ್ತಿನ ಅವ್ವ’ ರಾಮಪ್ಪ ಕೋಟಿಹಾಳ ಅವರ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಪಡೆದ ಕವನಸಂಕಲನವಾಗಿದೆ. ಇಲ್ಲಿನ ಕವಿತೆಗಳು ಅಸಹಾಯಕತೆ ಹಾಗೂ ಆಕಾಂಕ್ಷೆಯ ನಡುವಿನ ಘರ್ಷಣೆಯಿಂದ ಮೂಡಿಬಂದಿವೆ. ಅನುಭವ ಮತ್ತು ವೈಚಾರಿಕತೆ, ಎರಡೂ ಪಾತಳಿಯಲ್ಲಿ ಅಸಹಾಯಕತೆಯೂ ಆಕಾಂಕ್ಷೆಯೂ ಅರ್ಥಪೂರ್ಣವಾದ ಹಾಗೂ ತೀವ್ರವಾದ ದ್ವಂದ್ವವೊಂದನ್ನು ಸೃಷ್ಟಿಸುತ್ತದೆ. ಇದು ಈ ಕವಿತೆಗಳ ಬಹುದೊಡ್ಡ ವೈಶಿಷ್ಟ್ಯ. ದ್ವಂದ್ವವು ಇಲ್ಲಿನ ಬದುಕಿನ ಅಂತಃಸತ್ವ, ಅಲ್ಲದೆ ಬದುಕನ್ನು ಗ್ರಹಿಕೆಗೆ ತಂದುಕೊಳ್ಳಲು ಅನುವು ಮಾಡಿಕೊಡುವ ಆಲೋಚನಾ ಕ್ರಮವಲ್ಲ. 'ಅವ್ವನ ಸೂರ್ಯ' ಕವಿತೆಯ ಈ ಸಾಲುಗಳನ್ನು ಗಮನಿಸಿ. ಮಧ್ಯರಾತ್ರಿ ಎದ್ದು ಕೂಡುವ ಅವ್ವ ಕಳೆದ ದಿನಗಳಿಗೆ ಕಣ್ಣುಕೊಟ್ಟು ನಗುತ್ತಾಳೆ ಉದಯಿಸುವ ಸೂರ್ಯನ ಹಿಡಿಯಲು ಪ್ರಯತ್ನಿಸುತ್ತಾಳೆ ಆದರೆ ಇಂಥ ದೊಡ್ಡ ಆಕಾಂಕ್ಷೆಗಳನ್ನು ಹೊಂದಿದ ತಾಯಿ ಒಡಲಾಳದ ಸಾಕವ್ವನಂತೆ 'ಧಣಿಗಳ ದನಿ' ಕೇಳಿಬಂದಾಗ ಅಥವಾ 'ಅನ್ನದ ಕನಸಿಗೆ ಕಣ್ಣುಕೊಟ್ಟ' ತನ್ನ ಗಂಡನ ನೆನೆದಾಗ ಅಸಹಾಯಕಳಾಗಿಬಿಡುತ್ತಾಳೆ. ಅವ್ವ ಮಾತುಕಳೆದುಕೊಂಡ ಕೋಗಿಲೆ ಬಿಟ್ಟಕಣ್ಣು ಬಿಟ್ಟಂತೆ ತೂಗುವ ನಕ್ಷತ್ರದೆಡೆ ತೋರು ಬೆರಳ ನೀಡಿ ನಿಟ್ಟುಸಿರು ಬಿಡುವಳು ಬೆಳಕಿನಲ್ಲೆ ಬೆಳಕು ಮಾಯವಾದಂತೆ 'ಭೂಮಿ ಒಂದು ಕ್ಷಣ ನಿಂತು ಬಿಟ್ಟರೆ' ಎಂಬ ಕವಿತೆಯಲ್ಲಿ ಇದೇ ದ್ವಂದ್ವವು ಅತ್ಯಂತ ಕ್ರಿಯಾಶೀಲವಾದ ಅಭಿವ್ಯಕ್ತಿ ಪಡೆದುಕೊಂಡಿದೆ. ನಿರಂತರ ಚಲನೆಯಲ್ಲಿರುವ ಭೂಮಿ ಒಂದುಕ್ಷಣ ನಿಂತು ಬಿಟ್ಟರೆ ಅಂತರಂಗದ ಹಕ್ಕಿಯ ರೆಕ್ಕೆಗೆ ಬಾನ ಗಡಿಗಳು ಬಡಿದುಕೊಳ್ಳುತ್ತವೆ ಇದೊಂದು ವಿಶಿಷ್ಟ ಪ್ರತಿಮೆ, ಬಾನ ಎತ್ತರಗಳನ್ನು ಮುಟ್ಟಲು ಹಕ್ಕಿಗೆ ಸಾಧ್ಯವಲ್ಲದಿರಬಹುದು, ಆದರೆ ಕ್ಷಣಕಾಲ ಭೂಮಿ ಚಲನೆ ಮರೆತು ನಿಂತರೆ ಅದು ಸಹಜವಾಗಿಯೇ ಸಾಧ್ಯವಾದೀತು.

Related Books