ರಮೇಶಬಾಬು ಯಾಳಗಿ ಅವರ ಎರಡನೇ ಸಂಕಲನ ಇದಾಗಿದ್ದು ನವನೀತ ತುಡಿತ ಕವಿತೆಗಳು ಇಲ್ಲಿವೆ. ಕವಿಯು ವಚನಕಾರರ ಕಾವ್ಯಾಭವವನ್ನು ಸಾಕಷ್ಟು ಎರವಲು ಪಡೆದಿದ್ದು ಭಾಷೆ, ಶೈಲಿ, ಚಿಂತನೆಗಳು ವಚನಕಾರರ ಕಾವ್ಯಕ್ಕೆ ಹತ್ತಿರವೆನಿಸುತ್ತದೆ. ಸಮಕಾಲೀನ ಸಮಾಜಕ್ಕೆ ಪ್ರಜ್ಞಾವಂತಿಕೆಯಿಂದ ಸ್ಪಂದಿಸುತ್ತಲೇ ಕಾವ್ಯಪ್ರಜ್ಞೆ, ಸಮಾಜಪ್ರಜ್ಞೆ ಕಾಪಿಟ್ಟುಕೊಂಡಿದ್ದಾರೆ ಕವಿಗಳು..
ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...
READ MORE