ವಿಜಯಶ್ರೀಸಬರದ ಅವರ ಕವನ ಸಂಕಲನ ‘ಲಕ್ಷ್ಮಣರೇಖೆ ದಾಟಿದವರು’. ಈ ಕೃತಿಗೆ ಚಂದ್ರಶೇಖರ ಪಾಟೀಲ ಅವರ ಬೆನ್ನುಡಿ ಬರಹವಿದೆ. 1979 ರಲ್ಲಿ ಜ್ವಲಂತ ಕವನ ಸಂಕಲನ ಹೊರತಂದ ಡಾ.ವಿಜಯಶ್ರೀ ಸಬರದ ಅವರು ಜ್ವಲಂತವಾಗಿಯೇ ಬೆಳೆಯುತ್ತ ಒಂದು ದಶಕದ ನಂತರ ಲಕ್ಷ್ಮಣರೇಖೆ ದಾಟಿದವರು ಸಂಕಲನ ಹೊರತಂದಿದ್ದಾರೆ. ವಾಸ್ತವದ ಕ್ರೌರ್ಯವನ್ನು ಬಿಡುಗಟ್ಟಿನಿಂದ ದಾಖಲಿಸುತ್ತಲೇ ಅದರ ವಿರುದ್ಧ ಬಂಡೇಳುವ ಈ ಕಾವ್ಯ ಕೇವಲ ಬಹಿರಂಗದ ಸಾಮಾಜಿಕ ನೆಲೆಯಲ್ಲಿ ಕೆಲಸ ಮಾಡದೆ ತೀರ ಆತ್ಮೀಯವಾದ ವೈಯಕ್ತಿಕ ಸಂಬಂಧಗಳಲ್ಲಿಯೂ ಸೂಕ್ಷ್ಮವಾದ, ದಟ್ಟವಾದ ವಿಷಾದದ ಎಳೆಗಳನ್ನು ಚಿತ್ರಿಸುತ್ತದೆ ಎಂದಿದ್ದಾರೆ ಚಂದ್ರಶೇಖರ ಪಾಟೀಲ. ಜೊತೆಗೆ ಇಲ್ಲಿನ ಕವನಗಳಲ್ಲಿ ವೈವಿಧ್ಯತೆಯಿದೆ. ಪಲ್ಲವಿ, ಬೆಂಜಮಿನ್ ನೆನಪಿಗೆ, ಮರೆಯಲಾಗದ ಕವಿತೆ, ನೀನು-ನಾನು, ದೂರವಾದವನು, ನೆನಪು, ಭಾರತಮಾತಾಕಿ ಜೈ, ಈ ಮುಂತಾದ ರಚನೆಗಳಲ್ಲಿ ಕಲಾತ್ಮಕ ಗಟ್ಟಿತನವಿದೆ. ಈ ದಿಕ್ಕಿನಲ್ಲಿ ಡಾ.ವಿಜಯಶ್ರೀ ಅವರು ಬೆಳೆಯುತ್ತಲೇ ಹೋಗಬಲ್ಲರೆಂಬ ಭರವಸೆ ಈ ಸಂಕಲನದುದ್ದಕ್ಕೂ ಕಾಣುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...
READ MORE