‘ಕಾತರ’ ಕೃತಿಯು ನಜೀರ್ ಚಂದಾವರ ಅವರ ಕವನ ಸಂಕಲನವಾಗಿದೆ. ಈ ಕೃತಿಯು ಕವಿಗಳು ತಮ್ಮ ಕಾಲೇಜು ಜೀವನದಲ್ಲಿ ಬರೆದಿದ್ದು, ತಾವು ಕಂಡ ಸಮಾಜದ ಅಂಕುಡೊಂಕುಗಳನ್ನು ಕವನದಲ್ಲಿ ದಾಖಲಿಸಿದ್ದಾರೆ. ಸಮಾಜದಲ್ಲಿ ಆಗಬೇಕಾದ ಬದಲಾವಣೆಗಳನ್ನು, ಜನರ ಜೀವನದ ಶೈಲಿಯನ್ನು ರಸವತ್ತಾಗಿ ವಿವರಿಸಿರುತ್ತಾರೆ.
ರಾಯಚೂರು ಜಿಲ್ಲೆಯ ಹಟ್ಟಿಯ ಚಿನ್ನದ ಗಣಿ ನಜೀರ್ ಮಿಯಾನ್ ಹಟ್ಟಿ ಅವರ ಊರು. 1970ರ ಜೂನ್ 12 ರಂದು ಜನನ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಊರಿನಲ್ಲೇ ಪೂರೈಸಿ, ಬಿ.ಎ. ಪದವಿಯನ್ನು ಧಾರವಾಡದಲ್ಲಿ ಹಾಗೂ ದೂರಶಿಕ್ಷಣ ಮೂಲಕ ಎಂ.ಎ. ಪದವಿ ಪೂರ್ಣಗೊಳಿಸಿದರು. ನಂತರ, ದೂರಶಿಕ್ಷಣ ಮೂಲಕವೇ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದು, ಸಂಜೇವಾಣಿ ಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಹಿರಿಯ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಓದು ಹಾಗೂ ಕಥಾ ರಚನೆ ಇವರ ಹವ್ಯಾಸ. ...
READ MORE