2018ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿ ಪ್ರಶಸ್ತಿ ಪಡೆದ ಕೃತಿ ಕವಿ ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’. ಈ ಕೃತಿಗೆ ಡಾ.ಹೆಚ್.ಎಲ್. ಪುಷ್ಪ ಹಾಗೂ ಸುಬ್ಬು ಹೊಲೆಯಾರ್ ಅವರ ಬೆನ್ನುಡಿ ಬರಹಗಳಿವೆ. ಸಂಕಲನದ ಕುರಿತು ಬರೆಯುತ್ತಾ 'ಇಲ್ಲಿನ ಕವಿತೆಗಳಲ್ಲಿ ಕಾವ್ಯದ ಕಟ್ಟುಪಾಡುಗಳಲ್ಲಿ ಬಂಧಿಸಿಕೊಳ್ಳದ ಸ್ವಾತಂತ್ರ್ಯ ಮನೋಭಾವವೊಂದು ಮೇಲಿಂದ ಮೇಲೆ ಅಲೆದಾಡುತ್ತದೆ. ಈ ಮನೋಭಾವ ಹೊಸ ಅನುಭವಗಳಿಗೆ, ಹೊಸ ಸಂವೇದನೆಗಳಿಗೆ ಮೇಲಿಂದ ಮೇಲೆ ತೆರೆದುಕೊಳ್ಳುತ್ತದೆ. ಕವಿತೆಗೆ ಅಥವಾ ಕವಿತೆಗಳಿಗೆ ಒಂದು ಕೇಂದ್ರವಿರಬೇಕು ಎಂಬ ಸಿದ್ಧ ಕಲ್ಪನೆಯನ್ನು ಮತ್ತೆ ಮತ್ತೆ ಪ್ರಶ್ನಿಸುವ, ಪಕ್ಕಕ್ಕಿಡುವ ಇಲ್ಲಿನ ಕವಿತೆಗಳು ಹೆಚ್ಚಾಗಿ ಕ್ರಮಿಸುವುದು ಆನು ಒಲಿದಂತೆ ಹಾಡುವೆ ಎಂಬ ಸ್ವಶೋಧಿತ-ಒಪ್ಪಿತ ಹಾದಿಯಲ್ಲಿ. ತನ್ನ ಆಪ್ತವಾದ ಭಾವಲೋಕವನ್ನು ನಿಧಾನವಾಗಿ ಆದರೆ ಸ್ಥಿರವಾಗಿ ಖಾತರಿಪಡಿಸಿಕೊಳ್ಳುತ್ತಾ ಅದನ್ನು ಬಿಡಿಬಿಡಿ ಚಿತ್ರಗಳ ಮೂಲಕ ಹಿಡಿದಿಡುವ ಜೀವನ ಪ್ರೀತಿಯ ಹುಡುಗಿಯೊಬ್ಬಳು ಇಲ್ಲಿನ ಕವಿತೆಗಳಲ್ಲಿ ಕಂಡು ಬರುತ್ತಾಳೆ' ಎಂದಿದ್ದಾರೆ ಕವಿ ಎಚ್.ಎಲ್. ಪುಷ್ಪ. ಹಾಗೇ ಚಿತ್ರಗಳು ಪದಗಳ ಜೋಡಿಸುವಿಕೆಯಿಂದಾಗಿ ಮೈದುಂಬಿಕೊಂಡು ಇಲ್ಲಿ ಕವಿತೆಗಳಾಗಿವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕವಿ, ಲೇಖಕಿ, ಸ್ಮಿತಾ ಮಾಕಳ್ಳಿ ಮೂಲತಃ ತಿಪಟೂರಿನವರು. ಪಿ.ಯೂ ವರೆಗೆ ತಿಪಟೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಆನಂತರ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಹಾಗೂ ಭಾಷಾಂತರ ಡಿಪ್ಲೊಮೋ ಪದವಿ, ಅಲ್ಲಿಯೇ ಕೆಲ ಕಾಲ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ ಸದ್ಯ ಅದೇ ವಿಶ್ವವಿದ್ಯಾನಿಲಯದಲ್ಲಿ ನೊಬೆಲ್ ಬಹುಮಾನ ಪುರಸ್ಕೃತ ಲೇಖಕ ಇಸಾಕ್ ಬಾಶೆವಿಸ್ ಸಿಂಗರ್ ಅವರ ಕಾದಂಬರಿಗಳ ಕುರಿತು ಪಿಹೆಚ್.ಡಿ ಮಾಡುತ್ತಿದ್ದಾರೆ. ಈ ವರೆಗೆ ಎರಡು ಕೃತಿಗಳು ಪ್ರಶಸ್ತಿಗಳು ಪ್ರಟಕವಾಗಿವೆ. ಮೊದಲ ಪುಸ್ತಕ ಕೈಗೆಟಕುವ ಕೊಂಬೆಗೆ ರಾಜ್ಯ ...
READ MORE