ದೇಸಿ ಕವಿ ಎಸ್. ಶಿಶಿರಂಜನ್ (ಶಿಶಿರ) ಅವರ ವಿರಚಿತ ಖಂಡಕಾವ್ಯ ರಾಮಾಯಣದ ಪ್ರಮುಖ ಪಾತ್ರವೊಂದರ ಸುತ್ತ ಓದುಗರನ್ನು ಗಿರಕಿ ಹೊಡೆಸುತ್ತ ಸಮಕಾಲೀನ ಬದುಕಿನ ಅನೇಕ ಮಗ್ಗಲುಗಳನ್ನು ಅನಾವರಣಗೊಳಿಸುವ ಒಂದು ವಿಶಿಷ್ಟ ಪ್ರಯತ್ನ.
’ಶಿಶಿರ’ ಕಾವ್ಯನಾಮದ ಮೂಲಕ ಹೆಸರಾಗಿರುವ ಎಸ್.ಶಿಶಿರಂಜನ್ ಜನಿಸಿದ್ದು 1989 ಮಾರ್ಚ್ 5 ರಂದು ಮೈಸೂರಿನ ದೊಡ್ಡಮಾರಗೌಡನಹಳ್ಳಿಯಲ್ಲಿ. ತಂದೆ ಶಂಕರನಾರಾಯಣ, ತಾಯಿ ಲಲಿತ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಕೃತಿಗಳೆಂದರೆ ಸಂವೇದನೆ(ಕವನ ಸಂಕಲನ), ಇದೆಂಥಾ ದೇಶಪ್ರೇಮ ರೀ?! (ನಾಟಕ), ಅವ್ವ(ಹನಿಗವಿತೆಗಳು), ಲಂಕೇಶನ ತಲೆಗಳು(ಖಂಡಕಾವ್ಯ). ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿ, ರಂಗ ಪ್ರತಿಭಾ ಸನ್ಮಾನ ಹಾಗೂ ಸ್ಪಂದನಶ್ರೀ ಪ್ರಶಸ್ತಿ ಲಭಿಸಿದೆ. ...
READ MOREಕ್ರೌರ್ಯವೀರ್ಯಗಳಿಗೆ ಮುಖವಾಡ ಜಡಿದು ಜಗದ ತುಂಬಾ ಅಂಡಲೆಯಲು ಬಿಟ್ಟಿವೆ ... ಅದೇ ಹಸಿವು ಅದೇ ಆಲಸ್ಯ ಅದೇ ಆಕಳಿಕೆ ಕುಂಭಕರ್ಣನಳಿದರೂ ಹಾಹಾಕಾರ ಮಾತ್ರ ಹಾಗೆಯೇ ಇದೆ ... ಲಂಕೇಶನಳಿದರೂ ತಲೆಗಳು ಮಾತ್ರ ಹಾಗೆಯೇ ಇವೆ ... ( ರಾವಣನ ತಲೆಗಳು ಖಂಡಕಾವ್ಯದ ಆಯ್ದಭಾಗ ) ................................................................... ಪುನರಾರಂಭ ... ದಸರೆಯ ಸಂಭ್ರಮ ಕಾಲ್ಪನಿಕ ಮಾತ್ರ ಏಕೆಂದರೆ ದುಷ್ಟನ ಸಾವೂ ಸೂತಕ ದುಷ್ಟಬುದ್ದಿಯ ಸಾವು ಮಾತ್ರ ಸಡಗರಸೂಚಕ ... " ಹತ್ತು ತಲೆಗಳನ್ನು ಕೆತ್ತಿಯಾಗಿದೆ " ಮುಂದಿನದು? "ಸ್ಥಿತಿ , ಲಯ ನನಗೆ ಸಂಬಂಧವಿಲ್ಲ " ಸೃಷ್ಟಿಕರ್ತನ ಉವಾಚ .. ಲಯಕಾರಕನೇ ತಲೆ ಕಾಯ್ವ ಅಭಯವಿತ್ತಿರಲು ಭಕ್ತಬಾಂಧವನ ನವ ಅವತಾರದ ನಿರೀಕ್ಷೆಯಲ್ಲಿ ಶಂಖ ಚಕ್ರ ಜಾಗಟೆಗಳು .. ಹೊರಟನೋ ಹೊರಟ ಸರ್ವಾಂತರ್ಯಾಮಿಯೇ ಹೊರಟ ಏರಿ ಹತ್ತು ತಲೆಗಳ ಹೊತ್ತು ಕಳಚಿದ ಕಾಲಾಶ್ವಗಳ ಸಾರೋಟ ಬಿಲ್ಲೇರಿಸಿ ತೊಟ್ಟವನೇ ಆ ದಿವ್ಯಬಾಣವ ಹುಡುಕುವ ಹಟ ಹೊರಟ ವಿಭೀಷಣ ಪತ್ತೆಗೆ ದಿಟ ... ವಿಭೀಷಣ? ( ರಾವಣನ ತಲೆಗಳು ಖಂಡಕಾವ್ಯದ ಆಯ್ದಭಾಗ )