ಬೆಳಗು ಬಾ ಬೆಳಕೆ

Author : ಪರಶುರಾಮ ಬ. ಕೊತಿನ

Pages 88

₹ 70.00




Year of Publication: 2011
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

“ಬೆಳಗು ಬಾ ಬೆಳಕೆ - ಪರಶುರಾಮ ಬಿ. ಕೋತಿನ ಅವರ ಕವನ ಸಂಕಲನ. ಆಲಮಟ್ಟಿ ಜಲಾಶಯದಲ್ಲಿ ತಮ್ಮ ಜಮೀನನ್ನ ಕಳೆದುಕೊಂಡು ಉಳಿದ ಅಲ ಜಮೀನಿನಲ್ಲಿಯೇ ಬದುಕಿನ ಸಾಗಣೆ ಮಾಡುತ್ತಿರುವ ಪರಶುರಾಮ ಅವರು ಕುಟುಂಬದ ಬಡತನದ ಬಿಸಿಗೆ ಕಮರಿ ಹೋದರೂ,  ತಮ್ಮ ಕವಿತೆಗಳಲ್ಲಿ ಜೀವಪರ ಆಲೋಚನೆಗಳನ್ನಿಟ್ಟುಕೊಂಡಿದ್ದಾರೆ. ಕಷ್ಟಪಟ್ಟು ಓದುತ್ತಾ, ತಮ್ಮ ಕುಟುಂಬವನ್ನು ಸಲುಹಿದ ಇವರು ಇದೀಗ ಬೆಳಕನ್ನು ನೀಡುವ ವಿದ್ಯುತ್ ನಿಗಮದ ನೌಕರರಾಗಿ ಕೆಲಸ ಮಾಡುತ್ತಲೇ, ಕಾವ್ಯದ ಬೆಳಕನ್ನು ಹೊತ್ತಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಈ ಸಂಕಲನಕ್ಕೆ ಹೆಸರನ್ನು ನೀಡಿರುವ ಕವಿತೆಯ ಹಿಂದಿರುವ ಆಶಯವೇ ಬೆಳಕಿಗೊಂದು ಆಹ್ವಾನ. ದೇವರ ಗುಡಿ, ಬಡವನ ಗುಡಿಸಲು, ಕೊನೆಗೆ ಸಿರಿವಂತರ ಮನೆ, ಅಲ್ಲಿ ಬೆಳಕು ಬೆಳಗುತಿರಬೇಕು, ಈ ಬೆಳಕು ಕವಿಯ ಹೃದಯಕ್ಕೂ ಬೇಕು, ಕಣ್ಣಿದ್ದು ಕುರುಡಾಗಿರುವವರಿಗೂ ಬೇಕು. ಮುಖ್ಯವಾಗಿ ಕತ್ತಲೆಗೊಂದು ರೂಪ ಬೇಕು, ಅದು ಬೆಳಕಿನ ರೂಪ, ಕತ್ತಲೆ ಬೆಳಕಿನ ರೂಪದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಕಲ್ಪನೆ ಅಪರೂಪದ್ದು. ಇಂತಹ ಬೆಳಕಿನ ನಡುವೆ ಮನುಷ್ಯ ಬದುಕಬೇಕು, ನೂರಾರು ಆಸೆಗಳು, ಕನಸುಗಳು, ಸಹನೆಗಳ ಜೊತೆಯಲ್ಲಿ ಬದುಕಬೇಕು ಎಂಬುದು ಕವಿತೆಯ, ಕವಿಯ ಆಶಯವಾಗಿದೆ. 

Related Books