ಕವಯತ್ರಿ ನಾಗರೇಖಾ ಗಾಂವಕರ್ ಅವರ 41 ಕವನಗಳ ಸಂಕಲನ-ಏಣಿ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ‘ಇಲ್ಲಿರುವ ಎಲ್ಲ ಮೆಟ್ಟಿಲುಗಳು ಭದ್ರವಿಲ್ಲ. ಆದರೆ, ಏರಲು ಯಾವ ಭಯವೂ ಇಲ್ಲ. ಏಣಿಯಂತಹ ಸಾಮಾನ್ಯ ವಸ್ತುವೊಂದರಿಂದ ಬದುಕಿನ ಸಂದೇಶಗಳನ್ನು ನೀಡ ಹೊರಟ ಇಲ್ಲಿಯ ಕವಿತೆಗಳ ಆಶಯಗಳು ಜೀವನ ಸತ್ಯವನ್ನು ಪ್ರತಿನಿಧಿಸುತ್ತವೆ. ಕವಿತೆಗಳಲ್ಲಿ ಸ್ತ್ರೀವಾದವೂ ಇದೆ. ಈ ಕುರಿತ ದಿಟ್ಟ ಒಳನೋಟವೂ ಇದೆ. ಪರಂಪರೆ-ಆಧುನಿಕತೆಯ ಮೌಲ್ಯವನ್ನು ತೂಗಿ ನೋಡುವ ಹಂಬಲವಿದೆ. ಕೌಟುಂಬಿಕ ನೆಮ್ಮದಿ ಹಾಳಾಗುವ ಪ್ರಕ್ರಿಯೆಗೆ ವಿಷಾದವಿದೆ. ಒಡಹುಟ್ಟಿದವರ ಸಂಬಂಧವಿದ್ದರೂ ಆ ಹಿಂದಿನ ಅನುಬಂಧವಿಲ್ಲ ಎಂದು ಹಳಹಳಿಸುತ್ತಾರೆ. ಎಲ್ಲರೂ ಮುಖವಾಡಗಳನ್ನು ಧರಿಸುತ್ತಾರೆ ಎಂಬ ಬಗ್ಗೆ ಅಸಮಾಧಾನವಿದೆ. ಹೀಗೆ ನೈಜ ಮನುಷ್ಯರ ನಿರ್ಮಾಣವನ್ನು ಕಾವ್ಯ ಮಾಡಬೇಕಿದೆ. ಅದು ನಾಗರೇಖಾ ಅವರ ಕವಿತೆಗಳಲ್ಲಿ ಕಾಣುತ್ತೇವೆ’ ಎಂದು ಪ್ರಶಂಸಿಸಿದ್ದಾರೆ.
ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿಧರೆಯಾದ ಅವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ’ (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ), ಸಮಾನತೆಯ ಸಂಧಿಕಾಲದಲ್ಲಿ (ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ), ಕವಾಟ (ಪುಸ್ತಕ ಪರಿಚಯ ಕೃತಿ) ಅವರ ಪ್ರಮುಖ ಕೃತಿಗಳು. ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ...
READ MORE