ಬೇಂದ್ರೆಯವರಿಗೆ 1974೪ರ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿ ’ನಾಕುತಂತಿ’. 1964೪ರಲ್ಲಿ ಮೊದಲ ಮುದ್ರಣ ಕಂಡ ಈ ಸಂಕಲನದಲ್ಲಿ ಒಟ್ಟು 44 ಕವಿತೆಗಳಿವೆ. ಮುನ್ನುಡಿಯಲ್ಲಿ ಬೇಂದ್ರೆಯವರು ’ಭೋಗಸಾಧನೆಯ ಕವನ ಭಂಡಾರವೂ ಇದೆ. ಯೋಗ ಸಾಧನೆಯ ಕವನ ಮಾರ್ಗವೂ ಇದೆ. ಸಾಮಾನ್ಯತೆಯ ಅಜ್ಞಾನ , ಅಹಂಕಾರಗಳಿಗೆ ನಾವು ಪಟ್ಟಗಟ್ಟಿ ಅದನ್ನು ಶಿಲಾಶಾಪಕ್ಕೆ ಗುರಿಪಡಿಸಬಾರದು. ರಾಮಪಾದ ಸ್ಪರ್ಷ ಅದಕ್ಕೂ ಬೇಕು. ಆ ದಿವ್ಯ ದರ್ಶನದಲ್ಲಿ ವ್ಯಾಧನು ವಾಲ್ಮೀಕಿಯಾಗುತ್ತಾನೆ. ಇಂಥ ಹುತ್ತದ ಸುತ್ತ, ’ಆನು’ ತಾನು’ ’ನಾನು’ ’ನೀನಿ’ನ ನಾಕುತಂತಿಯ ಈ ಚೌದಂತ ವೀಣೆ ಮಿಡಿಯುತ್ತಿದೆ’ ಎಂದು ಬೇಂದ್ರೆ ಹೇಳಿದ್ದಾರೆ. ’ಶೂನ್ಯದಲ್ಲಿ ಲೋಕೋದಯ, ಶೂನ್ಯದಲ್ಲಿ ಲೋಕಾಲಯ, ಬುದ್ದಿ ಶೂನ್ಯ ಮೊಳಗಿದ ಇದ್ದ ಹಾಗೆ ಮುಳುಗಿದ’ ಎನ್ನುವ ಕವಿ ’ಭಕ್ತಿ ಮಾಧುರ್ಯದಲ್ಲಿ ಪ್ರೇಮಶಕ್ತಿ , ಶ್ರೀಕೃಷ್ಣ ರಾಧೆಯಲ್ಲಿ ರಂಜಕ ವಿರಕ್ತಿ’ ಎನ್ನುತ್ತಾರೆ. ಅವರವರಿಗೆ ಅವರ ಹಾದಿ –ಒಂದೇ ದಾದಿ ಯುಗದ ಮಧ್ಯ ಬಿಂದು ಒಂದು’ ಎನ್ನುವ ಕವಿ ಚೈತನ್ಯದ ಪೂಜೆ ನಡೆದಿದೆ ಎನ್ನುತ್ತ ಪ್ರೀತಿಯೆನ್ನುವ ನೈವೇದ್ಯ, ಇದು ಎಲ್ಲರ ಹೃದಯದ ಸಂವೇದ್ಯ. ಗೋವಿಂದ ಪೈಗಳ ಜ್ಞಾನದ ಜಿಜ್ಞಾಸೆ, ದೇವುಡು ಅವರ ಜೀವನವನ್ನೇ ನಾಟಕವನ್ನಾಗಿ ನೋಡುವ ದೃಷ್ಟಿ ಮತ್ತು ವಿವೇಕಾನಂದರ ಆನಂದ ಶಕ್ತಿಗಳನ್ನು ಮೆಚ್ಚಿ ಕವಿ ಶ್ರದ್ದಾಂಜಲಿ ಕವಿತೆಗಳನ್ನು ರಚಿಸಿ ಈ ಸಂಕಲನದಲ್ಲಿ ರಚಿಸಿದ್ದಾರೆ.
ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...
READ MOREಜ್ಞಾನಪೀಠ ಪ್ರಶಸ್ತಿ-1973