ಬಣ್ಣಗಾರ

Author : ಎಚ್. ಡುಂಡಿರಾಜ್

₹ 0.00




Year of Publication: 2022
Published by: ಸಪ್ನ ಬುಕ್ ಹೌಸ್‌
Address: ಬನ್ನೇರ್‌ಘಟ್ಟ್‌ ರಸ್ತೆ, ಹುಳಿಮಾವು, ಬೆಂಗಳೂರು- 560076
Phone: 0804256 6299

Synopsys

ಚುಟುಕು ಕಾವ್ಯ ಸಾಹಿತಿ ಎಚ್.‌ ಡುಂಡಿರಾಜ್‌ ಅವರ ಕವನ ಸಂಕಲನ ಕೃತಿ ʻಬಣ್ಣಗಾರʼ. ಇಲ್ಲಿರುವ ಕವನಗಳನ್ನು ಐದು ಭಾಗಗಳಲ್ಲಿ ವಿಭಾಗ ಮಾಡಲಾಗಿದೆ; ಮೊದನೆಯ ಭಾಗ ಇಡಿಗವನಗಳು. ಪುಸ್ತಕದ ಶೀರ್ಷಿಕೆಯಲ್ಲಿರುವ ʻಬಣ್ಣಗಾರʼ ಕವನವು ಈ ವಿಭಾಗದಲ್ಲಿ ಬರುತ್ತದೆ. ಜೊತೆಗೆ ಅನೇಕ ಸ್ತ್ರೀ ಕಾಳಜಿ ಕವಿತೆಗಳೂ ಇಲ್ಲಿವೆ. ಎರಡನೆಯ ಭಾಗದಲ್ಲಿ ಸಾಂದರ್ಭಿಕ ಕವನಗಳಿವೆ. ಇಲ್ಲಿ ಸಂದರ್ಭಗಳು ಮತ್ತು ಕೆಲವು ಸಾಧಕರ ಪರಿಚಯವಿದೆ. ಹಾಗಾಗಿ ವ್ಯಕ್ತಿಗಳಿಗೆ ಅನುಗುಣವಾಗಿ ಕವಿತೆಗಳ ಲಹರಿಯೂ ಬದಲಾಗುತ್ತದೆ. ಮೂರನೆಯ ಹಾಗೂ ನಾಲ್ಕನೇ ಭಾಗಗಳಲ್ಲಿ ಅಣಕವಾಡು, ಭಾವಗೀತೆಗಳು ಮತ್ತು ಗಝಲ್‌ಗಳಿವೆ. ಕೊನೆಯ ಐದನೇ ಭಾಗದಲ್ಲಿ ಹೈಕ್ಕುಗಳಿವೆ. ಇಲ್ಲಿರುವುದು ಬರೀ ಕಿರುಗವಿತೆ ಅಥವಾ ಹಾಸ್ಯ ಪ್ರಧಾನ ಕವಿತೆಗಳಲ್ಲ, ತುಸು ಗಂಭಿರ ಕವನಗಳಾಗಿವೆ. ಡುಂಡಿರಾಜ್ ಅವರು ಪ್ರತಿಯೊಂದರಲ್ಲೂ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಹೀಗೆ ಒಟ್ಟು 144 ಹೈಕುಗಳನ್ನು ಬರೆದಿದ್ದಾರೆ. ಅವು ಒಂದಕ್ಕಿಂತ ಒಂದು ವಿಶೇಷವಾಗಿವೆ.

About the Author

ಎಚ್. ಡುಂಡಿರಾಜ್
(18 August 1956)

ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ.  ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್‍ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.  2011ರಲ್ಲಿ ನಡೆದ ಸಂಯುಕ್ತ ಅರಬ್‍ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...

READ MORE

Related Books