ದ.ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಕಾಲೇಜುಗಳ ಕನ್ನಡ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಕವನ ಸಂಕಲನ. ಡಾ.ಚಂದ್ರಶೇಖಕ ಕಂಬಾರರು ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು ಹೇಳುವಂತೆ ’ ಇಲ್ಲಿನ ಕವಿತೆಗಳನ್ನು ನಾನು ಯಾಕೆ ಸ್ವಾಗತಿಸುತ್ತಿದ್ದೇನೆ ಅಂದರೆ, ಈ ಕವಿತೆಗಳ ನಮ್ಮ ಪರಿಸರದೊಂದಿಗೆ ತಮ್ಮ ಹಸಿಬಿಸಿ ಕನಸುಗಳನ್ನು ಹಂಚಿಕೊಳ್ಳುವ ಕಾತರ ತೋರಿಸಿದ್ದರಿಂದ ಎಂದಿದ್ದಾರೆ. ವೇಣುಗೋಪಾಲ ಕಾಸರಗೋಡು ಅವರ ಮಾತಿನಂತೆ’ ಕೇವಲ ಉತ್ಸಾಹ ಮಾತ್ರ ಈ ಖ್ಯಾತಿಯ ಬಂಡವಾಳವಲ್ಲ ಎಂಬುದು ಇದನ್ನು ಓದಿನೋಡಿದ ಯಾರಿಗಾದರೂ ಅನ್ನಿಸಬಹುದು. ನಿರ್ದಿಷ್ಟವಾದ ಉದ್ದೇಶಾತ್ಮಕ ಹಾಗೂ ಕ್ರಿಯಾತ್ಮಕ ನಿಲುವು ತಳೆಯುವ ಪ್ರಬುದ್ಧ ಅಭಿವ್ಯಕ್ತಿಯನ್ನು ಇಂಥ ಎಳೆಯ ಕವಿಗಳಿಂದ ನಿರೀಕ್ಷಿಸುವುದು ತಪ್ಪಾಗಬಹುದೇನೋ. ಆದರೆ ಇಂದೀಗ ಸುಪ್ತವಾಗಿಯೋ ಪ್ರಕಟವಾಗಿಯೋ ವ್ಯಕ್ತಗೊಳ್ಳುತ್ತಿರುವ ವಿದ್ಯಾರ್ಥಿ ಜನಾಂಗದ ಅಶಾಂತಿ, ಅಸಹನೆ, ರೊಚ್ಚು,ನೈರಾಶ್ಯಗಳು ಅವುಗಳ ಹಿಂದಿರುವ ಆರ್ಥಿಕ, ಸಾಮಾಜಿಕ ಕಾಳಜಿಗಳು, ಪ್ರಾಮಾಣಿಕ ಕಳಕಳಿ ಇವುಗಳ ಕೆಲವು ಮಾದರಿಗಳಂತೂ ಇಲ್ಲಿನ ಕವನಗಳಲ್ಲಿ ಖಂಡಿತ ಇವೆ ಎಂದು ಹೇಳಿದ್ದಾರೆ. ಅಚಿಂತ್ಯರು- ಬಿ ವಿಜಯಲಕ್ಷ್ಮಿ ಸೋಮಯಾಜಿ, ಅಜ್ಜಿಗೊಂದು ಮಾತು-ಸುಧಾ ಬಾಜಿಕೊಟ್ಟಿ, ಅವನೀಗ ಬಂದಾನು-ಪಿ.ಎಂ.ಆಲಿ ಪೆರ್ಲ,ಅಂತರ್ಧ್ವನಿ-ಶೈಲಜಾ ಎಂ.ಕರಿಯಾಲ ಹೀಗೆ ಅನೇಕ ಕವಿಗಳ ಕವನಗಳು ಈ ಕೃತಿಯಲ್ಲಿ ಕಾಣಬಹುದು.
ಮಧುರಕಾನನ ಗಣಪತಿ ಭಟ್ಟ ಅವರು ದಕ್ಷಿಣ ಕನ್ನಡದ ಪುತ್ತೂರಿನ ದರ್ಬೆ ಮೂಲದವರು. ಭೂಗರ್ಭ ಶಾಸ್ತ್ರದ ಬಿ ಎಸ್ ಸಿ ಪದವೀಧರರಾಗಿರುವ ಇವರು ಅಂತರ್ಜಲ ಸಂಶೋಧಕ ನಾಗಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಕಾಲೇಜು ವಿದ್ಯಾರ್ಥಿಹಂತದಲ್ಲೇ ವಾಹಿನಿ ಕಲಾಸಂಘ ಸ್ಥಾಪನೆ ಮಾಡಿ ,2010ರಿಂದ ರಾಜ್ಯಮಟ್ಟ್ಟದ ಸಂಸ್ಥೆಯಾಗಿ ಕಟ್ಟಿದವರು. ಹಲವಾರು ಗಾಯನ ತರಭೇತಿ ಶಿಬಿರಗಳು, ಭಾವಗಾಯನ ಭಾವನರ್ತನ ಗೋಷ್ಠಿಗಳ ಆಯೋಜನೆ, ಕವಿಗೋಷ್ಠಿ ಕಥಾಗೋಷ್ಠಿ, ವಿಮರ್ಶಾಗೋಷ್ಠಿಗಳ ಆಯೋಜನೆಚಮಾಡಿದ್ದಾರೆ. ಕೃತಿಗಳು::ಮಧುರವಾಹಿನಿ (ಕವನ ಸಂಕಲನ) ಗಾನಮಧುರಂ (ಧ್ವನಿಮುದ್ರಣ 2017) ಸಂಪಾದಿತ ಕೃತಿ - ವಾಹಿನಿ(1982) ಸವಿಜೇನು(2019) ...
READ MORE