ಸುಬ್ರಹ್ಮಣ್ಯ ಅವರು ಕೃಷಿಕರು. ಜೊತೆಗೆ ಪುರೋಹಿತರು. ಪತ್ರಿಕೆಗಳಲ್ಲಿ ಬರುವ ಶಿಶುಪ್ರಾಸಗಳನ್ನು ನೋಡಿ ಅವರು ಸ್ಫೂರ್ತಿಗೊಂಡು ಹಾಡಿದ ಹಾಡುಗಳು ಇಲ್ಲಿವೆ. ಪ್ರಣತಾರ್ತಿಹರನ್ ಅವರು ಸಂಕೇತಿ ಸಮುದಾಯದ ಅಧ್ಯಯನಕ್ಕಾಗಿ ಮಾಡಿದ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಬರೆದುಕೊಂಡ ಈ ಹಾಡುಗಳನ್ನು ಸಂಪಾದಿಸಿದ್ದಾರೆ. ಇಲ್ಲಿರುವ 13 ಶಿಶುಪ್ರಾಸಗಳಲ್ಲಿ ಬಹುತೇಕ ಎಲ್ಲವೂ ನೀತಿ ಹೇಳುವಂಥವು. ನೇರ ನುಡಿಯಬೇಕು, ಕಳ್ಳತನ ಮಾಡಬಾರದು, ಜಂಬಪಡಬಾರದು, ನಿಯತ್ತಿರಬೇಕು, ವಿದ್ಯೆಯ ಜತೆಗೆ ಬುದ್ಧಿಯೂ ಇರಬೇಕು ಇಂಥ ನೀತಿಗಳು ಒಳಗೊಂಡಿವೆ.
ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...
READ MORE