ರಾಗ ರಂಗೋಲಿ

Author : ಯಶಸ್ವಿನಿ ಶ್ರೀಧರ ಮೂರ್ತಿ

₹ 80.00




Year of Publication: 2020
Published by: ಪ್ರೇರಣಾ ಪ್ರಕಾಶನ
Address: ಅಜ್ಜಿಬಳ.ತಾ: ಶಿರಸಿ.

Synopsys

ಕವಿ ಯಶಸ್ವಿನಿ ಶ್ರೀಧರ ಮೂರ್ತಿ ಅವರ ಕವನ ಸಂಕಲನ ರಾಗ ರಂಗೋಲಿ. ಪ್ರಬುದ್ಧ ಸಾಲುಗಳೊಂದಿಗೆ ಮನಮುಟ್ಟುವ, ಆಪ್ತಭಾವದಿಂದ ಎದೆತಟ್ಟುವ ಈ ಕವಿತಾ ಸಂಕಲನಕ್ಕೆ- ಖ್ಯಾತ ಕವಿ ಶ್ರೀಯುತ 'ರಾಜೀವ ಅಜ್ಜಿಬಳ'ಅವರು ಮುನ್ನುಡಿ ಬರೆದು, ಹರಸಿದ್ದಾರೆ. ಹಿರಿಯ ಸಾಹಿತಿ ಹಾಗೂ ವಿಮರ್ಶಕರಾದ ಶ್ರೀಯುತ 'ಸುಬ್ರಾಯ ಮತ್ತೀಹಳ್ಳಿ'ಅವರು, ಬೆನ್ನುಡಿಯಲ್ಲಿ ಶುಭಾಶಂಸನೆ ನೀಡಿದ್ದಾರೆ. ಯಶಸ್ವಿನಿಯವರು ತಮ್ಮ ಅಂತರಂಗದ ಭಾವಗಳನ್ನು ಅಕ್ಷರರೂಪದಲ್ಲಿ ಹರವಿರುವ ಈ ಕೃತಿಯಲ್ಲಿ- ರಂಗೋಲಿಯ ರಂಗು, ಸೊಬಗು, ಚುಕ್ಕಿಗಳ ಲೆಕ್ಕಾಚಾರ, ಎಳೆಗಳ ಸಮತೋಲನಗಳೆಲ್ಲವೂ ಇವೆ. ರಂಗೋಲಿಯೆಂದರೆ ಆಪ್ಯಾಯಮಾನವೆಂದಿರುವ ಕವಯಿತ್ರಿ- ರಂಗೋಲಿಯ ಅವಿನಾಭಾವ ಅನುಬಂಧದಿಂದಲೆ ತಮ್ಮೊಳಗಿನ ಕವಿತೆಗಳಿಗೊಂದು ಮೂರ್ತರೂಪ ಸಿಕ್ಕಿದೆ ಎನ್ನುತ್ತಾರೆ. ಈ ಮಾತನ್ನು ಪುಷ್ಟೀಕರಿಸುತ್ತದೆ-- ಸಂಕಲನದ ಶೀರ್ಷಿಕೆಯನ್ನೇ ಹೊತ್ತ 'ರಾಗರಂಗೋಲಿ' ಎಂಬ ಕವಿತೆ. ಎಪ್ಪತ್ತೊಂದು ಕವನಗಳಿರುವ ಈ ಕಾವ್ಯಗುಚ್ಛದಲ್ಲಿ ಪ್ರಕೃತಿ ಸೌಂದರ್ಯ, ನಾಡುನುಡಿ ಕುರಿತಾದ ಕವನಗಳು, ಋತುಮಾನದ ಬಗೆಗೆ, ದಾಂಪತ್ಯ, ಕೌಟುಂಬಿಕ ಬಾಂಧವ್ಯ, ತಾಯಿ-ಮಗು, ಜೀವನಾನುಭವ, ಒಲವು, ಆತ್ಮೀಯರ ಸ್ಮರಣೆಗಾಗಿ, ತವರು..ಹೀಗೆ ವೈವಿಧ್ಯಮಯ ಕವನಗಳೊಂದಿಗೆ, ಕವಯಿತ್ರಿಯವರ ನೆಚ್ಚಿನ ಹವ್ಯಾಸ ರಂಗೋಲಿ ಮತ್ತು ಅವರು ಕಲಿಸುವ ಗಣಿತದ ಬಗೆಗೂ ಸುಂದರ ಕವಿತೆಗಳಿವೆ. ಇವುಗಳಲ್ಲಿ, ಜೀವನೋತ್ಸಾಹದ ಲವಲವಿಕೆಯ ಕವನಗಳೂ ಇವೆ, ವಿಷಾದ, ಹತಾಶೆಗಳ ಅಭಿವ್ಯಕ್ತಿಯೂ ಇದೆ.

About the Author

ಯಶಸ್ವಿನಿ ಶ್ರೀಧರ ಮೂರ್ತಿ
(06 July 1984)

ಯಶಸ್ವಿನಿ ಶ್ರೀಧರ ಮೂರ್ತಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮೇಣಸಿಕೇರಿಯವರು. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೀಪನಳ್ಳಿಯಲ್ಲಿ ಪಡೆದ ಇವರು ಪ್ರೊಗ್ರೆಸ್ಸಿವ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದರು. ಶಿರಸಿಯ ಎಮ್.ಇ.ಎಸ್. ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿ, ಮೈಸೂರಿನ ಶಾರದಾ ವಿಲಾಸ ಮಹಾವಿದ್ಯಾಲಯದಿಂದ ಬಿ. ಎಡ್. ಪದವಿ, ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾಲಯದಿಂದ ಗಣಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಪುಸ್ತಕಗಳನ್ನು ಓದುವುದು, ಚಿತ್ರ ಬಿಡಿಸುವುದು, ಕಥೆ, ಕವನ, ಲೇಖನಗಳನ್ನು ಬರೆಯುವುದು ಇವರ ...

READ MORE

Related Books