ವರದೇಶ ಹಿರೇಗಂಗೆ ಅವರ ೩೩ ಕವನಗಳ ಕಿರುಸಂಕಲನ ಇದು. `ಸೂಕ್ಷ್ಮ ಸಂವೇದನೆಯ ತರುಣ ವರದೇಶ ಹಿರೇಗಂಗೆಯ ಕವಿತೆಗಳು ನಮ್ಮ ಆಸಕ್ತಿ ಕೆರಳಿಸುವುದಕ್ಕೆ ಮುಖ್ಯ ಕಾರಣ - ಅವುಗಳ ಹಿಂದೆ ಇರಬಹುದುಅನ್ನಿಸುವ ಒಂದು ಖಾಸಗಿ ಜಗತ್ತು ಮತ್ತು ಆಧುನಿಕ ಮನಸ್ಸು? - ಎಂದು ಮುನ್ನುಡಿಯಲ್ಲಿ ಜಯಂತ ಕಾಯ್ಕಿಣಿಯವರು ಹೇಳಿದ್ದಾರೆ.
ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕರಾಗಿರುವ ವರದೇಶ ಹಿರೇಗಂಗೆ ಅವರು ಮಣಿಪಾಲದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾರೆ. ಅವರು ಮಣಿಪಾಲ ವಿಶ್ವವಿದ್ಯಾಲಯದ ಸಮೂಹ ಸಂವಹನ ಕೇಂದ್ರದ ನಿರ್ದೇಶಕರೂ ಆಗಿದ್ದರು. ಧಾರವಾಡದ ಕರ್ನಾಟಕ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಪದವಿ ಪಡೆದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕೆಲಸ ಆರಂಭಿಸಿದರು. ಸದ್ಯ ಮಣಿಪಾಲದ ನಿವಾಸಿಯಾಗಿದ್ದಾರೆ. ಕವಿಗಳು ಕೂಡ ಅಗಿರುವ ವರದೇಶ ಅವರ ’ಯಾವ ಶಬ್ದದ ಮಾಯೆ’ ಕವನ ಸಂಕಲನವನ್ನು ಹೆಗ್ಗೋಡಿನ ಅಕ್ಷರ ಪ್ರಕಾಶನ ಪ್ರಕಟಿಸಿದೆ. ...
READ MORE