ಒಡಲ ಮೌನದ ಮಾತುಗಳಿಗೆ ಕವಿತೆಯ ಮೂಲಕ ಅಲೆವ ಮಾರ್ಗವನ್ನು ಮೌನ ಕಣಿವೆಯ ಒಡಲು ಕವನ ಸಂಕಲನದಲ್ಲಿ ತೋರಿದ್ದಾರೆ ಕವಿ ಶ್ರೀಪಾದ ನಾರಾಯಣ ಶೆಟ್ಟಿ. ನೆನಪುಗಳು ಮಿಂದವರ, ದಣಿದವರ ದನಿಯಾಗಿ ಹೊಸ ದಿಕ್ಕಿನತ್ತ ಸಾಗುವ ಕವಿತೆಗಳು ನೋವಿಗೂ-ನಲಿವಿಗೂ ಹರವಿಕೊಂಡು ಓದುಗನ ಅಂತಃಕರಣವನ್ನು ಬೆಚ್ಚಗಾಗಿಸುತ್ತವೆ.
ಲೇಖಕ ಶ್ರೀಪಾದ ನಾರಾಯಣ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಗ್ವಾ ಗ್ರಾಮದಲ್ಲಿ 1955 ಮೇ 14ರಂದು ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾದ ಅವರು ಕವನ ರಚನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಅವರು ಹಲವಾರು ಬಂಡಾಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ದಿನಕರ ದೇಸಾಯಿ-ಬದುಕು-ಬರಹ (ಮಹಾಪ್ರಬಂಧ), ಮೈತ್ರಿ, ಕಾವ್ಯ, ಕಾವ್ಯನಂದನ (ಕವನ ಸಂಗ್ರಹಗಳು), ಪ್ರಿಯಶರಾವತಿ, ಕಪ್ಪು ಜನರ ಕೆಂಪು ಕಾಶಿ (ಸಂಪಾದನೆ) ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ. ...
READ MORE