ಲೇಖಕ ಹಾಗೂ ಕವಿ ಶಿವಾನಂದ ಸು. ಪೀರಾಜಿ (ಎಸ್.ಎಸ್. ಪೀರಾಜಿ) ಅವರ ಕವನ ಸಂಕಲನ-ದೋಣಿ. ಒಟ್ಟು 41 ಕವನಗಳಿವೆ. ಉದಯ, ವಾತ್ಸಲ್ಯ, ಬದುಕು, ಮಸಿ ಹಚ್ಚಲು ನಡದಾರು, ಇದುವೆಂತಾ ಕಾಲವಯ್ಯ, ಪ್ರೇಮದ ಪಾತರಗಿತ್ತಿ, ಕಾಲೇಜಿನ ಕಾಲ, ಆಕಾಶಗಂಗೆ, ಇವಳು ಯಾರು, ಮೀನು ಕಹಳೆ, ರಾಟಿ, ಓಲಂಪಿಕ್ಸ್, ವಿಕಟಕವಿ, ಮಾರ್ಜಾಲ, ಕವನ, ದುಃಖ, ಒಂದು ಕಥೆ, ಗ್ರಹಣ, ಪ್ರವಾಹ, ಎಲವಿಲ್ಲದ ನಾಲಿಗೆ ಹೀಗೆ ಕವನಗಳಿದ್ದು, ಸಾಮಾಜಿಕ ಹೊಣೆಗಾರಿಕೆಯ ಕಾವ್ಯಾಂಶಗಳೊಂದಿಗೆ ಓದುಗರ ಗಮನ ಸೆಳೆಯುತ್ತದೆ. ಸಾಹಿತಿ ಡಾ. ಅನಿಲ್ ಕಮತಿ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಕವಿತೆಗಳು ಪರಿಣಾಮಕಾರಿಯಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ಕವಿ ಶಿವಾನಂದ ಪೀರಾಜಿ (ಎಸ್.ಎಸ್. ಪೀರಾಜಿ) ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದವರು. ಮಹಾರಾಷ್ಟ್ರದ ಕೊಲ್ಹಾಪುರದ ಸಂಜಯ್ ಘೋಡವತ್ ಇಂಟರನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣ ಪಡೆದರು. ವೃತ್ತಿಯಿಂದ ಶಿಕ್ಷಕರು. ಕೃತಿಗಳು: ದೋಣಿ (ಕವನ ಸಂಕಲನ) ...
READ MORE