ಪ್ರದೂಷಣ-ಲೇಖಕ ಅಮ್ಮಿ ಎ.ಎಸ್. ಚಂದ್ರ ಕುಮಾರ ಅವರ ಕವನ ಸಂಕಲನ. ಬದುಕಿನ ಓಟದಲ್ಲಿ ಎಂಬ ಉಪಶೀರ್ಷಿಕೆಯೊಂದಿಗೆ ಇಲ್ಲಿಯ ಕವಿತೆಗಳ ಸ್ವರೂಪವನ್ನು ತಿಳಿಸಿದ್ದಾರೆ. ಸಾಹಿತಿ ದೊಡ್ಡಾಲಹಳ್ಳಿ ರಾಜೇಶ್ ಅವರು ಕೃತಿಗೆ ಬೆನ್ನುಡಿ ಬರೆದು ‘ಹೃದಯಾಂತರಾಳದಿಂದ ಬಂದ ಸೌಂದರ್ಯೋಪಾಸನೆಗಳು, ವೇದನೆಗಳು ಇಲ್ಲಿಯ ಕವಿತೆಗಳ ವಸ್ತು. ಕವಿಯ ನಲ್ಲೆಯ ನೆನಪಿನ ಸಾಲುಗಳು ಓದುಗರನ್ನು ಸೆಳೆಯುತ್ತವೆ. ಜೀವನದ ಕಷ್ಟ-ಸುಖಗಳನ್ನು ಅನಾವರಣಗೊಳಿಸುತ್ತವೆ. ತಮ್ಮೊಳಗಿನ ಭಾವನೆಗಳು ಮಾತನಾಡಿದಾಗ ಬಂದ ಪದಗಳನ್ನೇ ಪ್ರದೂಷಣದಲ್ಲಿ ಅಕ್ಷರದಲ್ಲಿಳಿಸಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
ಲೇಖಕ ಅಮ್ಮಿ ಎ.ಸಿ. ಚಂದ್ರಕುಮಾರ್ ಅವರು ಮೂಲತಃ ಬೆಂಗಳೂರಿನವರು. ತಂದೆ ಅಮ್ಮಿ ಚಿನ್ನಪ್ಪ, ತಾಯಿ ಕಮಲಮ್ಮ. ಅಭಿನಯ, ನಾಟಕ ರಚನೆ, ನಿರ್ದೇಶನ, ರಂಗಸಜ್ಜಿಕೆ ವಿನ್ಯಾಸ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಹವ್ಯಾಸಿಗಳು. ಪತ್ರಿಕೋದ್ಯಮದಲ್ಲಿ ಪದವೀಧರರು. ‘ಅಮ್ಮಿ ನ್ಯೂಸ್’ ಪಾಕ್ಷಿಕ ಪತ್ರಿಕೆಯ ಸಂಪಾದಕರು. ವೃತ್ತಿಯಿಂದ ಪತ್ರಕರ್ತರು. ಕನ್ನಡ ಚಲನಚಿತ್ರ ಅಕಾಡೆಮಿ ನಡೆಸುವ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಸಾ.ರಾ. ಗೋವಿಂದು ಅವರು ಜೀವನ ಚರಿತ್ರೆ, ಕಥೆ., ಚಿತ್ರಕಥೆ. ಸಂಭಾಷಣೆ ರಚಿಸಿದ್ದಾರೆ. ಕನ್ನಡ ಪರ ಹೋರಾಟ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಕೃತಿಗಳು: ಎಲೆಮರೆಯ ಕಾಯಿ (ಸಾಮಾಜಿಕ ಚಿಂತನೆಗಳು), ಮನುಕುಲದ ಮಹಾನ್ ಹರಿಕಾರ ದಾಸಿಮಯ್ಯ, ಹುಡುಗಿಯರ ಅದ್ಭುತ ...
READ MORE