‘ಮೆಟ್ರೊ ಜೆನ್’ ಲೇಖಕ ವಿಕ್ರಮ ಹತ್ವಾರ ಅವರ ಕವನ ಸಂಕಲನ . ಕಳೆದ ಐದಾರು ವರ್ಷದಲ್ಲಿ ಬರೆದ ಕೆಲವು ಕವಿತೆಗಳು ಇಲ್ಲಿವೆ. ಹಿಂದಿನ ಕವಿತೆಗಳಿಗಿಂತ ಇವು ಬೇರೆಯಾಗಿವೆ ಎನ್ನುವುದು ಕೆಲವು ಸ್ನೇಹಿತರ ಹಿರಿಯರ ಓದಿನ ಅಭಿಪ್ರಾಯ. ಇರಬಹುದು, ಇದರಲ್ಲಿ ನನ್ನ ಉದ್ದೇಶಪೂರ್ವಕ ಪ್ರಯತ್ನವೇನಿಲ್ಲ. ಒದಗಿದಂತೆ ಬರೆಯುತ್ತಿದ್ದೇನೆ, ಅರ್ಬನ್ ಅನುಭವಗಳು ಕವಿತೆಗಳಾಗುವ ಸೋಜಿಗಕ್ಕೆ ವಿನಮ್ರನಾಗಿದ್ದೇನೆ ಎನ್ನುತ್ತಾರೆ ಕವಿ ವಿಕ್ರಮ ಹತ್ವಾರ.
ಇಲ್ಲಿ ಕೆಂಡದಲಿ ಸುಡು ಜೋಳ, ಶಿಲ್ಪ, ಆಡುಮಣೆ, ಮೊದಲ ನೋಟ, ಕಳ್ಳಬೆಕ್ಕು, ಕವಿತೆಯೆಂಬುದು, ಕಳೆದುಹೋಯಿತೆಂದು ತಿಳಿಯುವ ಮೊದಲೇ, ಹಕ್ಕಿ-ಧ್ಯಾನ, ಚಂದ್ರ, ಪರಿಷೆ, ತಾರೆ ಸೂಟಿ, ಲಂಡನ್ನಿನ ಕಡಲ ತಡಿ, ಕನಸು-ಸಂಪ್ರದಾಯಸ್ಥ ಭೋಜನ, ಕನಸು- ಪ್ರಯಾಣ, ಕನಸು-ಭಯ, ಎದುರುಮನೆ ಗೋಡೆ, ಸಂಜೆ ಪಾರ್ಕಿನ ಹಾಯ್ಕುಗಳು, ಪಾಕ, ಹಕ್ಕಿಗಳು, ಮಿಮಿಕ್ರಿ, ಹ್ಯಾಂಗೋವರ್, ಮೆಟ್ರೊ ಜೆನ್, ಫ್ಯಾನ್, ಸೊಳ್ಳೆಯ ಜೊತೆ ಸತ್ಸಂಗ, ಭಾಷೆ, ಆಮೆ ನಡಿಗೆ, ದೇಹಾತ್ಮ ವಿಲಾಸ, ನಕ್ಷತ್ರ, ಆ ಇಬ್ಬರು, ಒಂದು ದಿನ, ಈ ಊರಿನ ಸಂಜೆಗಳು, ಸೀರೆ, ದೀಪಾವಳಿಯ ಮಳೆ, ಮಳೆ ನಿಲ್ಲುತ್ತಲೇ, ಶಬ್ಧಗಂಧಿ, ಟೀನೇಜ್ ಗಣಕ, ಮೂರು ವರ್ಷದ ಮಗನಿಗೆ, ಮಗುವಾಗದೆ, ನನ್ನ ಮಗುವಿನ ಹಾಗೆ, ದೇವರ ನಗು, ಅಣ್ಣನ ಮಗಳು, ನಿರ್ವಾಣ, ಮಧುಲೋಕ, ಎಸ್. ಮಂಜುನಾಥ್, ಹಾಗೂ ಬೇಂದ್ರೆ ಎಂಬ 45 ಕವಿತೆಗಳು ಸಂಕಲನಗೊಂಡಿವೆ.
ವಿಕ್ರಮ್ ಹತ್ವಾರ್ ತಮ್ಮ ಮೊದಲ ಕಥಾಸಂಕಲನಕ್ಕೆ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪಡೆದವರು. ಕುಂದಾಪುರ ಮೂಲದವರಾದ ವಿಕ್ರಮ್, ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಜೀರೋ ಮತ್ತು ಒಂದು, ಅಕ್ಷೀ ಎಂದಿತು ವೃಕ್ಷ, ನೀ ಮಾಯೆಯೋಳಗೋ ಹಾಗೂ ಹಮಾರಾ ಬಾಜಾಜ್ ಎಂಬ ಕೃತಿಗಳನ್ನು ರಚಿಸಿದ್ದಾರೆ. ...
READ MORE