‘ಬೆಳಕು ಬಂತು ಬಯಲಿಗೆ’ಅಲ್ಲಮಪ್ರಭು ಬೆಟ್ಟದೂರು ಅವರ ಸಂಪಾದನೆಯ ಕವನ ಸಂಗ್ರಹವಾಗಿದೆ. ಅಭಿವೃದ್ಧಿಯ ಕನಸು ಕಾಣುತ್ತ ಅನ್ಯಾಯದ ಬಗ್ಗೆ ಕಿಡಿಕಾರುತ್ತ ಸಾಕಷ್ಟು ನೋವುಂಡರೂ ತಮ್ಮ ಕಲಾಸೇವೆಯನ್ನು ಕಡೆಗಣಿಸಲಿಲ್ಲ. ಇಂಥ ಪರಿಸ್ಥಿತಿಯಿಂದಾಗಿ ಬಂಡಾಯ ಕವಿತೆಗಳೇ ಈ ಜನರಿಂದ ಹೆಚ್ಚಾಗಿ ಮೂಡಿಬಂದಿವೆ. ಸಾಹಿತ್ಯದ ಮೂಲಕ ತಮ್ಮ ಅಹವಾಲನ್ನು ದೊರೆ ಹಾಗೂ ಶ್ರೀಸಾಮಾನ್ಯ ಇಬ್ಬರಿಗೂ ಕೇಳಿಸುವಂತೆ ದನಿಯೆತ್ತಿದ್ದಾರೆ.
ಅಲ್ಲಮ ಪ್ರಭು ಬೆಟ್ಟದೂರು ಅವರು 1951 ಜೂನ್ 30ರಂದು ಕೊಪ್ಪಳದಲ್ಲಿ ಜನಿಸಿದರು. ಗವಿ ಸಿದ್ದೇಶ್ವರ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಬಂಡಾಯ ಸಂಘಟನೆಯಲ್ಲಿ ಆಸಕ್ತಿಯಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಚಟುವಟಿಕೆಯಿಂದಿದ್ದಾರೆ. ಕವಿತೆ ಹಾಗೂ ಪ್ರಬಂಧ ರಚನೆ ಇವರ ಆಸಕ್ತಿ ವಲಯ. ಅಲ್ಲಮಪ್ರಭು ಅವರ ಪ್ರಮುಖ ಕೃತಿಗಳೆಂದರೆ ಕಟ್ಟಬಲ್ಲೆವು ನಾವು ಕೆಡಹಬಲ್ಲರು ಅವರು, ಇದು ನನ್ನ ಭಾರತ, ಕುದುರೆ ಮೋತಿ ಮತ್ತು ನಿಲುಗಿರಿ (ಕವನ ಸಂಕಲನಗಳು) ಮುಂತಾದವು. ...
READ MOREಹೊಸತು-2004- ಆಗಸ್ಟ್
ಹೈದರಾಬಾದ್ ಕರ್ನಾಟಕದ ಪ್ರದೇಶದ ಒಂದು ಕವಿಗೋಷ್ಠಿಯೇ ನೆರೆದಂತೆ ರಾರಾಜಿಸುವ ಈ ಸಂಕಲನ ಒಟ್ಟು ೧೦೫ ಕವಿಗಳ ಕವಿತೆಗಳನ್ನೊಳಗೊಂಡಿದೆ. ಈ ಬೆಳಕು ಬಂತು ಬಯಲಿಗೆ ಪ್ರದೇಶಕ್ಕೆ ರಾಜಕೀಯವಾಗಿ ಅನಾದರ ತೋರುವಂಥ ನಿರ್ಲಕ್ಷಿತ ಧೋರಣೆ ಮತ್ತು ನೈಸರ್ಗಿಕವಾಗಿ ಬರಗಾಲದ ಹೊಡೆತ ಇದ್ದಾಗ್ಯೂ ಈ ನೆಲದ ಸಾಂಸ್ಕೃತಿಕ - ಸಾಹಿತ್ಯಕ ಪ್ರತಿಭೆಗೆ ಎಳ್ಳಷ್ಟೂ ಕುಂದು ಉಂಟಾಗಲಿಲ್ಲ. ಅಭಿವೃದ್ಧಿಯ ಕನಸು ಕಾಣುತ್ತ ಅನ್ಯಾಯದ ಬಗ್ಗೆ ಕಿಡಿಕಾರುತ್ತ ಸಾಕಷ್ಟು ನೋವುಂಡರೂ ತಮ್ಮ ಕಲಾಸೇವೆಯನ್ನು ಕಡೆಗಣಿಸಲಿಲ್ಲ. ಇಂಥ ಪರಿಸ್ಥಿತಿಯಿಂದಾಗಿ ಬಂಡಾಯ ಕವಿತೆಗಳೇ ಈ ಜನರಿಂದ ಹೆಚ್ಚಾಗಿ ಮೂಡಿಬಂದಿವೆ. ಸಾಹಿತ್ಯದ ಮೂಲಕ ತಮ್ಮ ಅಹವಾಲನ್ನು ದೊರೆ ಹಾಗೂ ಶ್ರೀಸಾಮಾನ್ಯ ಇಬ್ಬರಿಗೂ ಕೇಳಿಸುವಂತೆ ದನಿಯೆತ್ತಿದ್ದಾರೆ.