‘ಮೊಬೈಲ್ ಧ್ವನಿಗಳು’ ಎನ್.ಎಸ್. ಶ್ರೀಧರ ಮೂರ್ತಿ ಅವರ ಕವನ ಸಂಕಲನ. ಈ ಸಂಕಲನದ ಯಶಸ್ವೀ ಕವಿತೆಗಳಲ್ಲಿ ಒಂದಾದ ಮೊಬೈಲ್ ಧ್ವನಿಗಳು ಸಂಗ್ರಹದ ಶೀರ್ಷಿಕೆಯೂ ಆಗಿರುವುದು ಅರ್ಥಪೂರ್ಣವಾಗಿದೆ. ತಕ್ಷಣದ ಸಂಪರ್ಕದ ಸ್ಫೂರ್ತಿಗೆ, ಒಂಟಿತನದ ನಿವಾರಣೆಗೆ, ಆತ್ಮೀಯತೆಗೆ, ಸ್ನೇಹಪರ ಸಂವಾದಕ್ಕೆ ಸುಲಭ ಸಾಧನವಾಗಿ ಇಂದು ಈ ಚಿಕ್ಕ ಯಂತ್ರ ಬಳಸಲ್ಪಡುತ್ತಿದೆ. ಬಳಸಿಕೊಂಡವದನೆ ನಾವು ಅದಕು ಇದಕು ಎದಕು ಎಂದು ಬೇಂದ್ರೆಯವರ ಕ್ಷಮೆಕೋರಿ ಹೇಳಬಹುದು. ಈ ಅತ್ಯಾಧುನಿಕ ಯಂತ್ರವನ್ನು ಕಾವ್ಯವಸ್ತುವಾಗಿಸಿ ಅದನ್ನೇ ಕವಿತೆಗೂ ಪ್ರತೀಕವಾಗಿಸುವಲ್ಲಿ ಶ್ರೀಧರಮೂರ್ತಿಯವರ ಕೌಶಲ್ಯವನ್ನು ಕಾಣಬಹುದಾಗಿದೆ.
ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು 'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...
READ MORE