ನಗ್ನ ದೀಪದ ನೆರಳು

Author : ಮಿಲನ್ ಎಂ.ಎಚ್

Pages 100

₹ 80.00




Year of Publication: 2019
Published by: ಸಾಹಿತ್ಯವನ ಪ್ರಕಾಶನ
Address: ನಂ. 43/2/3 ಭೈರವ ನಗರ, ವಾಲೆಗೇರಹಳ್ಳಿ ಜ್ಞಾನಭಾರತಿ, ಬೆಂಗಳೂರು -56

Synopsys

ಮಿಲನ್ ಎಂ.ಎಚ್ ಅವರ ಕವಿತೆಗಳ ಸಂಗ್ರಹ ’ನಗ್ನ ದೀಪದ ನೆರಳು’.

ಈ ಕವನ ಸಂಕಲನದಲ್ಲಿನ ಕವಿತೆಗಳು ತಾರುಣ್ಯದ ಸಹಜ ಸೆಡವು, ಪ್ರೇಮದ ಹುಡುಕಾಟ, ಪ್ರಭುತ್ವವನ್ನು ಪ್ರಶ್ನಿಸುವ ಏರಯ ಧ್ವನಿ, ಬಂಡಾಯದ ಕೂಗು ಎಲ್ಲವನ್ನೂ ಕುರಿತು ಹೇಳುವಂತದ್ದು. 

ಕಂಡುಂಡ ಅನುಭವಗಳ ಜೊತೆ, ಘಟನೆಗಳ ಜೊತೆ ಮತ್ತು ವಾಸ್ತವದ ವಸ್ತುಗಳನ್ನು ಕೇಂದ್ರವಾಗಿರಿಸಿಕೊಂಡು ಕವಿ ಕವಿತೆಗಳ ರಚನೆ ಮಾಡಿದ್ದಾರೆ. 

About the Author

ಮಿಲನ್ ಎಂ.ಎಚ್
(08 February 1993)

ಮಿಲನ್ ಎಂ.ಎಚ್ ಮೂಲತಃ ಮಂಡ್ಯ ಜಿಲ್ಲೆಯ ಮುತ್ತೇಗೆರೆ ಊರಿನವರು. ತಂದೆ ಹೊನ್ನಯ್ಯ, ತಾಯಿ- ಲಕ್ಷ್ಮಿ. ಎಂ.ಎ ಸ್ನಾತಕೋತ್ತರ ಕನ್ನಡ ಪದವಿಯನ್ನು ಪಡೆದು ಬಿ.ಎಡ್ ಕೋರ್ಸ್ ಪೂರೈಸಿದ್ದಾರೆ. ಖಾಸಗೀ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಸಾಹಿತ್ಯ ವನ ಎಂಬ ಹೆಸರಿನ ಚರ್ಚೆಯ ಗುಂಪನ್ನು ಒಳಗೊಂಡು, ಪಠ್ಯವನ್ನು ಕುರಿತಾದ ಚರ್ಚೆ ನಡೆಸುವುದು ಇವರ ಹವ್ಯಾಸವಾಗಿದೆ.  ...

READ MORE

Reviews

’ಜಾತಿಗೆಟ್ಟ ನಮ್ ಕಾಲ್ಗಳು ನಿಮ್ ಉಚ್ಚೆ ಕುಡು

ಪಾದ್ಗಳ್ ಮ್ಯಾಲೆ ಬಾಯಕ್ ಬರ್ಕಂಡವೆ

ನಿಮ್ ಉಚ್ಚೆಯಾಗೆ ಸಕ್ರೆ ಇರ್ಬೇಕು..?

ಸಕ್ರೆ ತಿನ್ನೋ ಯಾಗ್ಯತೆ ನಮ್ಮೆಲ್ಲದೆ 

ನಿಮ್ ಉಚ್ಚೆ ಒಸಿ ಪಕ್ಕಕ್ಕೆ ಉಯ್ರಿ’

ಎಂದು ನಯವಾಗಿ ಕವಿ ಹೇಳಿದರೂ, ಅವನ ಯಾತನೆಗಳನ್ನು ದಾಟಿಸಿದರೂ ಎದುರಿನವನಿಗೆ ಅದು ಬರೆಯಾಗಿಯೇ ತಾಕುತ್ತದೆ. ಇಂಥ ಬೆಚ್ಚಿಬೀಳಿಸುವ ಜೀವಪರ ಕವಿತೆಗಳನ್ನು ಇಪ್ಪತ್ತಾರರ ಯುವಕವಿ ಮಿಲನ್ ಎಂ. ಎಚ್ ಓದುಗರ ಮುಂದಿಟ್ಟಿದ್ದಾರೆ. 'ನಗ್ನ ದೀಪದನೆರಳು' ಎನ್ನುವ ಅವರ ಚೊಚ್ಚಲ ಕವನ ಸಂಕಲನ ಯಾವುದೇ ರಿಯಾಯಿತಿ ಬಯಸದೇ ಭರವಸೆಯನ್ನು ಹುಟ್ಟಿಸುವಂತಿದೆ.

15 ಡಿಸೆಂಬರ್‌ 2019 

ಕೃಪೆ : ವಿಜಯ ಕರ್ನಾಟಕ

Related Books