‘ಈ ಚಿಟ್ಟೆ ಕಾಡಿದ ಹಾಗೆ’ ಲೇಖಕಿ ಸುಚಿತ್ರಾ ಹೆಗಡೆ ಅವರ ಕವನ ಸಂಕಲನ. ಈ ಕೃತಿಗೆ ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಅವರ ಬೆನ್ನುಡಿ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ..ಈ ಸಂಕಲನದಲ್ಲಿರುವ ಎಲ್ಲಾ ಕವನಗಳು ಕಾಲ ಧರ್ಮದೊಂದಿಗೆ ಶ್ರುತಿಗೊಂಡ ವೀಣೆಯಿಂದ ಹೊರಟ ನಾದದಂತೆ ಪ್ರತಿಧ್ವನಿಸುತ್ತಿವೆ. ಭಾವನೆಗಳ ಅಭಿವ್ಯಕ್ತಿಗೆ ಕಾವ್ಯ ಪ್ರಕಾರವನ್ನೇ ಬಹುತೇಕ ಮಹಿಳೆಯರು ಆಯ್ಕೆ ಮಾಡುತ್ತಾರೆ. ಯಾಕೆಂದರೆ, ಅವಳ ಹೃದಯದ ಮೌನದ ಹಾಡುಗಳು ಇಲ್ಲಿ ಅನುರಣಿಸುತ್ತವೆ. ಪ್ರತಿಮೆ, ಉಪಮೆ, ರೂಪಕಗಳಲ್ಲಿ ಸಿಂಗಾರಗೊಂಡು ಕವಿ ಹೃದಯಗಳನ್ನು ತಟ್ಟುತ್ತವೆ. ವಿಷ ಉಗುಳುವ ಚಿತ್ರ ವಿಚಿತ್ರ ಮಾಸ್ಕುಗಳು, ಎಲ್ಲೆಲ್ಲೂ ಚಿಗುರುವಾಸೆ ಹೊತ್ತ ಮರು ಬಳಕೆಯ ಕಸ, ಪ್ರೇಮ ತ್ಯಾಜ್ಯ, ಪತಿತ ಪಾವನದಾಟ, ಬಾನಿನ ಹೊಟ್ಟೆ ಸೀಳಿ ಹೊರ ಬಂದ ರವಿ ಇಂತಹ ಹಲವಾರು ಸಣ್ಣ ಸಣ್ಣ ಪ್ರತಿಮೆಗಳು ಸಾಂದ್ರಗೊಳಿಸಿದ ಭಾವ ಬಿಂದುಗಳಾಗಿದ್ದುಕೊಂಡೇ ವಿಸ್ತಾರವಾದ ವ್ಯಾಖ್ಯಾನವನ್ನೇ ನೀಡುತ್ತಿವೆ. ಭಾವನಾತ್ಮಕವಾಗಿ ಮತ್ತು ವೈಚಾರಿಕವಾಗಿಯೂ ಯೋಚಿಸಬಲ್ಲ ಕವಯತ್ರಿಯ ಸಂವೇದನೆಗಳು ನಮ್ಮನ್ನು ಸ್ಪಂದಿಸುತ್ತವೆ ಎನ್ನುತ್ತಾರೆ. ಜೊತೆಗೆ ಮಾನವ ಹೃದಯದಲ್ಲಿ ಅಡಗಿರುವ ಒಳ್ಳೆಯ ಗುಣಗಳನ್ನು ಹೊರ ಗೆಳೆಯುವಂತೆ ಮಾಡಬಲ್ಲವರೆ ನಿಜವಾದ ಕವಿಗಳು. ಈ ಕವಯತ್ರಿಗೆ ಆ ಶಕ್ತಿ ಸಿದ್ಧಿಸಿದೆ. ಪದಗಳನ್ನು ಮಿತವಾಗಿ ಬಳಸುವ ಮತ್ತು ವಿಸ್ತಾರವಾದ ಧ್ವನಿಯನ್ನು ಹೊಮ್ಮಿಸುವ ಹಲವಾರು ಕವನಗಳು ಈ ಸಂಕಲನದಲ್ಲಿವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಲೇಖಕಿ ಸುಚಿತ್ರಾ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ, ಕುಮಟಾದ, ಕತಗಾಲ ಗ್ರಾಮದವರು. ತಾಯಿ ಶಾರದಾ ಭಟ್ ಮತ್ತು ತಂದೆ ಪಿ.ಆರ್ ಭಟ್ಟರು ಹೈಸ್ಕೂಲಲ್ಲಿ ಶಿಕ್ಷಕರಾಗಿದ್ದರು. ಕುಮಟಾದ ಬಾಳಿಗಾ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಅವರು ಕಮಲಾ ಬಾಳಿಗಾ ಕಾಲೇಜಿನಿಂದ ರ್ಯಾಂಕ್ ನೊಂದಿಗೆ ಬಿಎಡ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಹಾಗೆಯೇ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಮತ್ತೆ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಹಲವು ಕವನಗಳು ನಾಡಿನ ವಿವಿಧ ಪತ್ರಿಕೆ/ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಕಾಲೇಜು ...
READ MORE