ಮೌನದ ಮಹಾ ಕೋಟೆಯೊಳಗೆ

Author : ಶ್ರೀದೇವಿ ಕೆರೆಮನೆ

₹ 120.00




Published by: ರಾಘವೇಂದ್ರ ಪ್ರಕಾಶನ ಅಂಕೋಲಾ

Synopsys

ಕವಿ ಶ್ರೀದೇವಿ ಕೆರೆಮನೆ ಅವರ ಕವನ ಸಂಕಲನ ಮೌನದ ಮಹಾ ಕೋಟೆಯೊಳಗೆ. ಈ ಕವನ ಸಂಕಲನವನ್ನು ಕವಿಯತ್ರಿ ತನ್ನ ಪ್ರೀತಿಯ ಅಕ್ಕನಿಗೆ ಅರ್ಪಿಸಿದ್ದಾರೆ. ಈ ಕವನಸಂಕಲನಕ್ಕೆ ಮುನ್ನುಡಿ ಬರೆದವರು ಕೆ ಪಿ ಬಸವರಾಜು.ತಮ್ಮ ಸುಧೀರ್ಘವಾದ ಮಾತುಗಳಲ್ಲಿ  ಈ ಕವನಸಂಕಲನದ ಕವಿತೆಗಳ ಅರ್ಥ ಮತ್ತು  ಕವನಸಂಕಲನದ ಒಳ ಅಂತರಂಗವನ್ನೆ ತೆರೆದಿಟ್ಟಿದ್ದಾರೆ. ಮತ್ತು ಶ್ಯಾಮಸುಂದರ ಬಿದರಕುಂದಿ ಅವರು ಬೆನ್ನುಡಿಯನ್ನ ಬರೆದು ಹಾರೈಸಿದ್ದಾರೆ.  ಈ ಮೌನದ ಮಹಾ ಕೋಟೆಯೊಳಗೆ ಕವನ ಸಂಕಲನದಲ್ಲಿ ನಲವತ್ತು ಕವಿತೆಗಳಿವೆ. ಪ್ರತಿಯೊಂದು ಕವಿತೆಯೂ ಕೂಡ ಒಂದೊಂದು ಆಶಯವನ್ನು ಹೊಂದಿದೆ ಆ ಕವಿತೆಯ  ಪದಗಳು ಸಾಲುಗಳು ಓದುಗನ ಮನಸ್ಸನ್ನು ಹಿಡಿದು ಒಂದೆಡೆ ನಿಲ್ಲಿಸುತ್ತವೆ. ಕವಿತೆಗಳಲ್ಲಿ ನೆಲ್ಸನ್ ಮಂಡೆಲ ಬಂದು ಹೋಗಿದ್ದಾರೆ. ಅಂಬೇಡ್ಕರ್  ಅವರನ್ನು ನೆನೆಯುತ್ತಾರೆ, ಕದವಿಲ್ಲದ ಮನೆಯ ನಿಷೇಧಗಳಿವೆ, ಮೌನದ ಮಾಹಾ ಕೋಟೆಯೊಳಗೆ ಮೌನವಿದೆ. ಕಣ್ಣೀರು ಕೂಡ ಮಾರಲ್ಪಡುತ್ತದೆ, ಬಿಕರಿಯಾಗದ ಕನಸುಗಳಿಗಿವೆ

About the Author

ಶ್ರೀದೇವಿ ಕೆರೆಮನೆ

ಉತ್ತರ ಕನ್ನಡ ಜಿಲ್ಲೆ  ಹಿರೇಗುತ್ತಿ ಮೂಲದ  ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್‌ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ). ’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ...

READ MORE

Related Books