ಹಾರಿ ಬಿಟ್ಟ ಹಕ್ಕಿ -ಕವಿ ಸಂತೋಷ ನಾಗರತ್ನಮ್ಮಾರ ಅವರ ಕವಿತಾ ಸಂಕಲನ. ಒಟ್ಟು 80 ಕವಿತೆಗಳಿವೆ. ಸಮಾಜದ ವಿಡಂಬನೆ, ಶೋಷಣೆ, ಬಂಡಾಯ, ಪ್ರೀತಿ, ತಾಯಿ ಸೇರಿದಂತೆ ವಸ್ತು ವೈವಿಧ್ಯತೆಗಳನ್ನು ಹೊಂದಿವೆ. ಕವಿ ಲೋಕೇಶ ಅಗಸನಕಟ್ಟೆಕೃತಿಗೆ ಮುನ್ನುಡಿ ಬರೆದು ‘ ಮೊದಲನೆ ಸಂಕಲನದಲ್ಲಿಯೇ ಕಾವ್ಯದ ಹೊಳವುಗಳ ಕುರಿತು ಹೊಸ ಭರವಸೆ ಮೂಡಿಸಿದ್ದಾರೆ. ಕವಿತೆಗಳು ಭಾವತೀವ್ರತೆಯನ್ನು ಒಳಗೊಂಡಿವೆ ಎಂದು ಪ್ರಶಂಸಿಸಿದ್ದರೆ, ಸದಾಶಿವಪ್ಪ ಡಿ.ಎಂ ಶ್ಯಾಗಲೆ ಅವರು ಬೆನ್ನುಡಿ ಬರೆದು ‘ಕನ್ನಡ ಭಾಷೆಯನ್ನು ಸಂಭ್ರಮಿಸಿ ಬರೆದಿರುವ ಇಲ್ಲಿಯ ಕವಿತೆಗಳು ಕನ್ನಡ ಭಾಷೆ ನಿರಂತರತೆ ಬಗ್ಗೆ ಭರವಸೆ ಮೂಡಿಸುತ್ತವೆ. ಕನ್ನಡ ಭಾಷೆ ನಶಿಸುತ್ತಿದೆ ಎಂದು ನಿರಾಶೆಪಡಬೇಕಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂತೋಷ್ ನಾಗರತ್ನಮ್ಮಾರ ಅವರು (ಜನನ: 01-06-1982) ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿಗುಡಾಳ್ (ಅಂಚೆ: ಮಾದಿಹಳ್ಳಿ) ಗ್ರಾಮದವರು. ಎಂ..ಎ ಬಿ. ಇಡಿ ಪದವೀಧರರು. ದಾವಣಗೆರೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದು, ‘ಹಾರಿ ಬಿಟ್ಟ ಹಕ್ಕಿ -ಇವರ ಮೊದಲ ಕವನ ಸಂಕಲನ. ...
READ MORE